kannada

April 17, 2007

ಶುಭಾಷಿತ

Filed under: Language - ಭಾಷೆ, sanskrit — kannada @ 8:28 pm

 

ಶುಭಾಷಿತಗಳನ್ನ ಯಾವುದೋ ಪರ್ಪಸ್ ಮೇಲೆ ಬರೆದಿರುತ್ತಾರೆವೆಂಬುದು ನನ್ನ ಅನಿಸಿಕೆ. ಅವುಗಳನ್ನ ಒಳ್ಳೆ ಅರ್ಥಕ್ಕಾಗಿಯೇ ಬರೆದಿರುತ್ತರೆಂಬುದು ಕೂಡ ಒಂದು ನಂಬಿಕೆ. ಏನೇ ಆದರೂ, ಅದನ್ನ ಅರ್ಥ ಮಾಡಿಕೊಳ್ಳುವುದರ ಮೇಲೆ ಆ ಶುಭಾಷಿತಗಳು ಏನನ್ನು ಕನ್ವೇ ಮಾಡುತ್ತವೆಂದು ಯೋಚಿಸಬೇಕಾಗುತ್ತೆ. ಇತ್ತೆಚೆಗೆ ನಾನು ಈ ಶುಭಾಷಿತವನ್ನ ಗಮನಿಸಿದೆ.

ಪುನರ್ ವಿತ್ತಂ ಪುನರ್ ಮಿತ್ರಂ ಪುನರ್ ಭಾರ್ಯಾ ಪುನರ್ ಮಹೀ!

ಏತತ್ ಸರ್ವಂ ಪುನರ್ ಲಭ್ಯಂ ನ ಶರೀರಂ ಪುನ: ಪುನ: ||

ಈ ಶುಭಾಷಿತದ ಪ್ರಕಾರ “ಸುಮಾರೆಲ್ಲವನ್ನೂ ಮತ್ತೊಮ್ಮೆ ಪಡೆಯಬಹುದು – ಧನ, ಮಿತ್ರರು, ಪತ್ನಿ, ಭೂಮಿ, ಇತ್ಯಾದಿ ಆದರೆ ತನ್ನ ದೇಹವನ್ನ ಮಾತ್ರ ಮರಳಿ ಪಡೆಯಲು ಸಾಧ್ಯವಿಲ್ಲ” –> ಇದರಲ್ಲಿ ಒಂದನ್ನ ನಾನು ಖಂಡಿಸುತ್ತೇನೆ. ಧನವನ್ನ ಮತ್ತೆ ಸಂಪಾದಿಸಬಹುದು ಸರಿ, ಮಿತ್ರರು ಒಬ್ಬರಲ್ಲದಿದ್ದರೆ ಮತ್ತೊಬ್ಬರು ಎನ್ನುವ ಹಾಗೆ ಬೇರೆ ಸ್ನೇಹಿತರನ್ನ ಮಾಡಿಕೊಳ್ಳಬಹುದು, ಭೂಮಿ ಮತ್ತೆ ನೀರು ಪಾಲಾಗುವ ಸ್ಂಭವ ಒಂದು ಬಿಟ್ಟು ಮತ್ತೆ ಖರೀದಿಸಬಹುದು; ಆದರೆ ಒಮ್ಮೆ ಕಳೆದ ಪತ್ನಿಯನ್ನ ಮತ್ತೆ ಪಡೆಯಲು ಸಾಧ್ಯವಿಲ್ಲ – ನನಗನಿಸುವ ಹಾಗೆ ಇದೂ ಕೂಡ ಅರ್ಥ ಮಾಡಿಕೊಂಡಂತೆ ಹೋಗುತ್ತೆ. ಅದೇ ಪತ್ನಿಯನ್ನ ಮರಳಿ ಪಡೆಯುವುದೇ ಅಥವ ಬೇರೆಯೊಬ್ಬರನ್ನ ಮದುವೆ ಮಾಡಿಕೋಳ್ಳುವ ಅರ್ಥವೆ? ಅಥವ ಡಿವೋರ್ಸ್ ಆಗಿರುವ ಪತ್ನಿಯನ್ನ ಮತ್ತೆ ಸಮಾಧಾನಿಸಿ ಕರೆತರುವುದೆ? ಅಥವ ಬೇರೆ ಏನಾದರೂ ಅರ್ಥವೆ?

 

 

October 30, 2006

ವಚನ

Filed under: ಕನ್ನಡ - Kannada — kannada @ 6:42 pm

ಕಳಬೇಡ ಕೊಲಬೇಡ

 

ಕಳಬೇಡ ಕೊಲಬೇಡ

ಹುಸಿಯ ನುಡಿಯಲುಬೇಡ

ಮುನಿಯಬೇಡ

ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬಣ್ಣಿಸಬೇಡ

ಇದಿರ ಹಳಿಯಲುಬೇಡ

ಇದೇ ಅಂತರಂಗ ಶುದ್ಧಿ

ಇದೇ ಬಹಿರಂಗ ಶುದ್ಧಿ

ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ

 

-ಬಸವಣ್ಣ

August 27, 2006

ಗಣೇಶ ಚತುರ್ಥಿ

Filed under: ಆಚಾರ-ವಿಚಾರ - Rituals — kannada @ 5:32 pm

ಆಗಸ್ಟ್ ೨೭, ೨೦೦೬ ರಂದು ಗಣೇಶ ಚತುರ್ಥಿ.

ಅಗಜಾನನ ಪದ್ಮಾರ್ಕಂ ಗಜಾನನಂ ಅಹರ್ನಿಷಮ್

ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ!

ನಾನು ಬೆಂಗಳೂರಿನಲ್ಲಿದ್ದಾಗ ಗೌರೀ ಗಣಪತಿ ಹಬ್ಬಗಳು ಬಹಳ ದೊಡ್ಡದಾಗಿ ಆಚರಿಸಿದ್ದುದು ಒಂಟು. ಅಲ್ಲಿ ಗಣಪತಿ ಹಬ್ಬವನ್ನ ಮನೆಗಳಲ್ಲೇ ಅಷ್ಟೇ ಅಲ್ಲದೆ ಸುಮಾರು ಜನರು ಒಟ್ಟಾಗಿ ಸೇರಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗಣಪತಿ ವಿಗ್ರಹಗಳನ್ನ ಕುಳ್ಳರಿಸಿ ಪೂಜಿಸುತ್ತಿದ್ದರು. ಇಂದೂ ಸಹ ಅಲ್ಲಿ ಈ ಅಭ್ಯಾಸ ವಾಡಿಕೆಯಲ್ಲಿದೆ. ನಮಗೆ ಇಷ್ಟವಾಗುತ್ತಿದ್ದ ಅಂಶವೆಂದರೆ ಬೆಳಗಿನ ಜಾವದ ಲೌಡ್ ಸ್ಪೀಕರ್ ಮೂಲಕ ಬರುತ್ತಿದ್ದ ಹಾಡುಗಳು. ನಾನಿನ್ನೂ ನಿದ್ದೆಯಿಂದ ಏಳುವುದೋ ಬೇಡವೋ ಎಂದು ಸ್ನೂಜ಼್ ತೆಗೆದುಕೊಳ್ಳುವ ಹೊತ್ತು ಸುಮಾರು ೬ ಘಂಟೆ ಇರಬಹುದು – ಈ ಹಾಡುಗಳನ್ನ ಕೇಳಿದ ಕೂಡಲೆ ಎದ್ದು, ಆ ದಿನಕ್ಕೆ ಬೇಕಾಗುವ ಹೂವು ಪತ್ರೆಗಳು, ಗರಿಕೆ ಹುಲ್ಲು, ಮಾವಿನ ಸೊಪ್ಪು ಮುಂತಾದವುಗಳನ್ನ ಅಣಿ ಮಾಡಲು ಮುಂದಾಗುತ್ತಿದ್ದೆವು. ನಂತರ ನೈವೇದ್ಯಕ್ಕೆ ಬೇಕಾದ ತಿಂಡಿ ತಿನಿಸುಗಳನ್ನ ಮಾಡಿಕೊಂಡು ಪೂಜೆ ಮೊದಲ್ಗೊಂಡು ನೈವೇದ್ಯವಾಗಿ ಪ್ರಸಾದ (ಕಡುಬು, ಇತ್ಯಾದಿ) ತಿನ್ನುವುದಕ್ಕೆ ಕಾಯುತ್ತಿರುತ್ತಿದ್ದೆ.  🙂

ಉದ್ಭವ.ಕಾಮ್ ವೆಬ್ ಸೈಟ್‌ನಲ್ಲಿ ಸಾಕಷ್ಟು ಹಾಡುಗಳು ಮುಂತಾದ ರೆಕಾರ್ಡಿಂಗ್‌ಗಳು ಇವೆ. ಗಣಪತಿ ಪೂಜೆಯಾನು ಆಚರಿಸುವ ವಿಧಾನ, ಸಂಕಷ್ಟಹರ ಸ್ತುತಿ, ಇತ್ಯಾದಿ ಹಾಡು, ಶ್ಲೋಕಗಳನ್ನ ಕೂಡ ಅಲ್ಲಿ ಪಡೆಯಬಹುದು.

ಗಣೇಶ ಚತುರ್ಥಿ ಶುಭಾಷಯಗಳು

ಗಣಪತಿ ತಮಗೆಲ್ಲರಿಗೂ ಸಕಲ ವಿಘ್ನಗಳನ್ನೂ ನಿವಾರಿಸಿ ಸುಗಮ ಹಾದಿಯನ್ನ ಒದಗಿಸಿಕೊಡಲೆಂದು ಆಶಿಸುವ…

ಹಾ.. ಅಕ್ಸ್ಮಾತ್ತಾಗಿ ಚಂದಿರ ದರ್ಶನವನ್ನೇನಾದರೂ ಈ ದಿನದಂದು ಮಾಡಿದರೆ ಗನ್ಣಪತಿ ಕಥಾ ಶ್ರವಣದಲ್ಲಿ ಇರುವ ಸ್ಯಮಂತಪೋಕ್ಯಾನ ಮಂತ್ರವನ್ನ ಪಠಿಸುವುದನ್ನ ಮರೆಯದಿರಿ.

ಸಿಂಹಃ ಪ್ರಸೇನಮವಧೀತ್ ಸಿಂಹೊ ಜಾಂಬವತಾ ಹತಃ

ಸುಕುಮಾರಕ ! ಮಾ ರೊದಿಃ ತವ ಹ್ಯೇಶ ಶ್ಯಮಂತಕಃ !

ರಾಮ್

August 26, 2006

ಗಣೇಶ ಚತುರ್ಥಿ ಶುಭಾಷಯಗಳು

Filed under: ಆಚಾರ-ವಿಚಾರ - Rituals — kannada @ 5:59 pm

August 16, 2006

ಕನ್ನಡ ವರ್ಡ್‌ಪ್ರೆಸ್

Filed under: ಕನ್ನಡ - Kannada, Language - ಭಾಷೆ — kannada @ 8:15 am

ಕನ್ನಡ ವರ್ಡ್‌ಪ್ರೆಸ್

ನನಗೆ ತಿಳಿದ ಮಟ್ಟಿಗೆ ವರ್ಡ್‌ಪ್ರೆಸ್‌ನವರದ್ದು ಇಂಗ್ಲೀಷ್ ಬ್ಲಾಗ್ ಇತ್ತು, ಆದರೂ ಬೇರೆ ಭಾಷೆಗಳಲ್ಲಿ ಯೂನಿಕೋಡ್ / ಬೇರೆ ಭಾಷೆಗಳಲ್ಲಿ ಬ್ಲಾಗ್ ಪಬ್ಲಿಷ್ ಕೂಡ ಆಗುತ್ತಿದ್ದವು. ನನಗೆ ಉತ್ಸಾಹ ತಂದದ್ದೇನೆಂದರೆ ಬೇರೆ ಬೇರೆ ಭಾಷೆಗಳಿಗೆ ಅದರದ್ದೇ ಆದ ಯು ಆರ್ ಎಲ್ ಕೂಡ ಇವೆ. ಈ ಒಂದು ಅಂಶ ಸುಮಾರು ಮೊದಲಿಂದಲೇ ಇದ್ದರೂ ಇರಬಹುದು ಆದರೆ ನಾನು ಈಗ ತಾನೇ ಗಮನಿಸಿದೆ. ಅದರಲ್ಲೂ ಉತ್ಸಾವೆಂದರೆ ಕನ್ನಡ ಬ್ಲಾಗ್ ಅಲ್ಲಿ ಹಾಟ್ ಲಿಸ್ಟ್‌ನಲ್ಲಿ ಒಂದಾಗಿತ್ತು 🙂

August 6, 2006

ಉಪಾಕರ್ಮ

Filed under: ಆಚಾರ-ವಿಚಾರ - Rituals — kannada @ 7:31 am

ಉಪಾಕರ್ಮ

 

ಇತ್ತೀಚೆಗೆ ಹೀಗೆ ಅಂತರ್ಜಾಲದಲ್ಲಿ ಬ್ಲಾಗ್ ಪೋಸ್ಟ್ ಮಾಡುತ್ತಿರಬೇಕಾದರೆ ಈ ಒಂದು ಸೈಟ್‌ನಲ್ಲಿ ಉಪಾಕರ್ಮ ಕುರಿತಾದ ವಿಚಾರಗಳು ಲಿಂಕ್ ಮಾಡಿರುವುದು ಕಂಡುಬಂತು. ಅವುಗಳಲ್ಲಿ ಇದು ನನಗೇನೋ ಬಹಳ ಉಪಯೋಗಕಾರಿ ಎಂದೆನಿಸಿತು. ಹಾಗೂ ಈ ವಿಷಯ ಸಮಯೋಪಕಾರಿ ಕೂಡ ಏಕೆಂದರೆ ಮುಂದಿನ ವಾರ (ಆಗಸ್ಟ್ ೮, ಹಾಗೂ ೯ ರಂದು ಯಜುರ್ ಹಾಗೂ ಋಗ್‌ವೇದೀ ಉಪಾಕರ್ಮವೆಂದು ಕ್ಯಾಲೆಂಡರ್‌ನಿಂದ ಗೊತ್ತಾಯಿತು.

 

ಇಂತಹ ಒಂದು ವಿಚಾರವನ್ನ ಬ್ಲಾಗ್ ಮಾಡಿದ್ದಕ್ಕೆ ಧನ್ಯವಾದಗಳು ರಾಮ್ಸಬೋಡ್.

 

 

ಸೋಪ್ ಲೇಕ್ ಪ್ರವಾಸ (soap lake)

Filed under: ಪ್ರವಾಸ - Travel — kannada @ 7:15 am

ಸೋಪ್ ಲೇಕ್ ಪ್ರವಾಸ

 

ಹೀಗೆ ಕೆಲವು ವರ್ಷಗಳ ಹಿಂದೆ ನಮ್ಮ ಪಕ್ಕದ ಮನೆಯವರು ಸೋಪ್ ಲೇಕ್ ಇಲ್ಲೇ ಹತ್ತಿರದಲ್ಲೆ ಅಂದರೆ ಸುಮಾರು ೧೪೦ಮೈಲುಗಳ ದೂರದಲ್ಲಿ ಇರುವುದಾಗೆ ಹೇಳಿದ್ದರು. ಸರಿ, ಕೆಲವು ತಿಂಗಳುಗಳು ಕಳೆದ ನಂತರ, ನಾವು ಮತ್ತೊಬ್ಬ ಸ್ನೇಹಿತ, ಮತ್ತಿನ್ನೊಬ್ಬರು ದಂಪತಿ – ಒಟ್ಟಿಗೆ ಐದು ಜನ ಆ ಹಾದಿಗೆ ಹೊರಟೆವು. ಮನೆಯಿಂದಲೇ ತಿಂಡಿ ತಿನಿಸುಗಳನ್ನ ಕೂಡ ಪ್ಯಾಕ್ ಮಾಡಿ ಹೊರಟಿದ್ದೆವು. ಹೇಗೋ ಡ್ರೈವ್ ಮಾಡಿಕೊಂಡು ಕೊನೆಗೂ ಸೋಪ್ ಲೇಕ್ ಸೇರಿದೆವು. ಯಾರೋ ಹೇಳಿದ್ದಂತೆ ಆ ನೀರಿನಲ್ಲಿ ಮುಳುಗಿ ಸ್ನಾನ ಮಾಡಲು ಸುಮಾರು ದೂರದಿಂದೆಲ್ಲ ಬರುತ್ತಾರೆ. ಆ ನೀರು ಹಾಗೂ ಮಣ್ಣಿನಲ್ಲಿ ಯಾವುದೋ ಮಿನರಲ್ ಹಾಗೂ ಚರ್ಮಕ್ಕೆ ಬೇಕಾದ ಮಿನರಲ್‌ಗಳು ಸಿಗುವುದೆಂಬುದು ಅಲ್ಲಿನ ನಂಬಿಕೆ. ಸರಿ ನಾವೂ ಸಹ ಏನೋ ಎಕ್ಸ್‌ಪೆಕ್ಟೇಷನ್ ಇಟ್ಟುಕೊಂಡು ಅಲ್ಲಿಗೆ ತಲುಪಿದೆವು. ಆ ನೀರಿನ ಬಳಿ ಹೋಗಿದ್ದೇ, ಅಲ್ಲಿ ಸ್ನಾನ ಮಾಡುವ ಹುಮ್ಮಸ್ಸು, ಆಸೆ ಎಲ್ಲಾ ಹೊರಟುಹೋಯಿತು. ಅಲ್ಲೀವರೆಗು ಹೋಗೆದ್ದ ಕಾರಣಕ್ಕೆ ಆ ನೀರಿನಲ್ಲಿ ಎಲ್ಲರೂ ಇಳಿದು ಸ್ವಲ್ಪ ನಡೆದಾಡಿ, ಅಲ್ಲಿರುವ ಜನರು ಆ ಮಣ್ಣನ್ನು ತಮ್ಮ ದೇಹಕ್ಕೆಲ್ಲಾ ಮೆತ್ತಿಕೋಂಡು ಸನ್ ಬಾತ್ / ಟಾನ್ ಮಾಡಿಕೊಳ್ಳುತ್ತಿದ್ದನ್ನ ಕಂಡೆವು. ಅಲ್ಲೇ ನಾವು ತೆಗೆದುಕೊಂಡು ಹೋಗಿದ್ದ ಊಟವನ್ನ ಮಾಡಿ ಅಲ್ಲಿಂದ ಹೊರಟೆವು.

 

ಇಂದಿಗೂ ಸಹ ಎಲ್ಲಾದರೂ ದೂರ ವಲಯಕ್ಕೆ ಪ್ರಯಾಣ ಮಾಡಬೇಕೆಂದರೆ ನಮ್ಮ ಆ ದಿನದ ಪ್ರವಾಸ ಜ್ನ್ಯಾಪಕ ಬರುತ್ತದೆ … ಹಹ್ಹಹ್ಹಾ…

 

ಬೇರೆ ಕೆಲವೌ ಗುರುತುಗಳು ಹಾಗೂ ವಿಷಯಗಳನ್ನ ಅಂತರ್ಜಾಲದಲ್ಲಿ ಪಡೆಯಬಹುದು.

a.http://www.soaplakecoc.org/soaplakepictures.html

b.

 

 

ರಾಮ್

 

May 22, 2006

ಸೌತೇಕಾಯಿ ಸೂಪ್

Filed under: ತಿಂಡಿ ತಿನಿಸು (Recipe) — kannada @ 6:44 am

ಸೌತೇಕಾಯಿ ಸೂಪ್

ಇಂದು ಸಂಜೆ ನಮ್ಮ ಊಟದ ನಂತರ ನಾವು ಬೆರೆ ಏನಾದರು ಹೊಸ ತಿಂಡಿ ಟ್ರೈ ಮಾಡಬೇಕೆಂದು ಕೊಂಡು ಇದೊಂದನ್ನ ಪ್ರಯತ್ನಿಸಿದೆವು – ಸೌತೇಕಾಯಿ ಸೂಪ್

ಸಾಮಗ್ರಿಗಳು:

  • ಸೌತೇಕಾಯಿ – 1
  • ಮೊಸರು – 1 ಕಪ್
  • ಸಣ್ಣ (ಸಾಂಬಾರ್) ಈರುಳ್ಳಿ – 2
  • ಉಪ್ಪು – ರುಚಿಗೆ ತಕ್ಕಷ್ಟು
  • ಮೆಣಸು ಪುಡಿ – 1/2 tsp

(more…)

May 19, 2006

ಪತ್ರ ಬರೆಯುವ ಅಭ್ಯಾಸ

Filed under: ಇತ್ಯಾದಿ, Language - ಭಾಷೆ — kannada @ 8:45 am

ಪತ್ರ ಬರೆಯುವ ಅಭ್ಯಾಸ

ಹಲವಾರು ವರ್ಷಗಳ ಹಿಂದೆ ನಾನು ನನ್ನ ಪೇರೆಂಟ್ಸ್‌ಗೆ ಪತ್ರ ಬರೆಯುತ್ತಿದ್ದು ವಾಡಿಕೆಯಲ್ಲಿತ್ತು. ಪತ್ರ ಬರೆಯುವುದೆಂದರೆ, ಲೇಖನಿ ಕಾಗದ – ಇದೇ ನನ್ನ ಮಾಧ್ಯಮವಾಗಿತ್ತು. ಆ ಸಮಯದಲ್ಲಿ ಕೀ ಬೋರ್ಡು ಮಾಪಿಂಗ್ ಒಂದಿತ್ತೆನಿಸುತ್ತೆ. ಎಷ್ಟೋ ಸರ್ತಿ ನನ್ನ ಸಹೋದರನನ್ನು ಪದೇ ಪದೇ ಅಂತಹದೊಂದನ್ನ ಪತ್ತೆ ಹಚ್ಚುವುದಕ್ಕೆ ಗೋಳಾಡಿಕೊಂಡದ್ದೂ ಇದೆ. ಹೀಗೇ ಒಂದು ದಿನ ಬರಹ ಟ್ರಾನ್ಸ್‌ಲಿಟರೇಷನ್ ಸಾಫ಼್ಟ್‌ವೇರ್ ಬಗ್ಗೆ ಕೇಳಿದೆ. ಆ ದಿನಗಳಲ್ಲಿ ಸಾಕಷ್ಟು ಕಾಲ ಟೈಪ್ ಮಾಡಿದ್ದೂ ಮಾಡಿದ್ದೆ. ಹಾಗೆ ಪ್ರಾರಂಭವಾದ ನನ್ನ ಪತ್ರ ಬರೆಯುವ ವಿದಾನ ಈಗಲೂ ಕೂಡ ವರ್ಷಕ್ಕೆ ಒಂದು-ಎರಡು ಸಾರಿ ಹಾಗಿದೆ. ಅಮ್… ಈಗಂತೂ ಕನ್ನಡದಲ್ಲಿ ಪತ್ರ ಬರೆಯುವುದೆಂದರೆ ಸಾಕಷ್ಟು ಕಾಲ ಕೊಡಬೇಕು. ಒಂದು ಪತ್ರವನ್ನ ಸುಮಾರು ೨-೩ ವಾರಗಳಲ್ಲಿ ಬರೆಯುತ್ತೇನೆ. ಒಹ್! ವೈಟ್ ಪೇಪರ್ ಅಥವ ಕಥೆ ಕಾದಂಬರಿ ಅಲ್ಲ, ಬರೀ ಒಂದು ಪುಟ ಕನ್ನಡ ಪತ್ರ. ನಾನು ಪ್ರಾರಂಭ ಮಾಡಿ ಪತ್ರ ಮುಗಿಸೋ ಹೊತ್ತಿಗೆ ಸುಮಾರು ವಿಷಯಗಳು ಹಳೆಯದಾಗಿ ಹೋಗಿರತ್ತೆ. ಹಹ್ಹಹ್ಹಾ…

(more…)

May 2, 2006

ಶುಭಾಷಿತಗಳು (shubhaaShita)

Filed under: Language - ಭಾಷೆ, sanskrit — kannada @ 6:03 am

ಶುಭಾಷಿತಗಳು

 

ನಾನು ಎಂಟನೆ ತರಗತಿಯಲ್ಲಿದ್ದಾಗ ಸಂಸ್ಕೃತ ಮೂರನೆ ಭಾಷೆ (third language )ಆಗಿತ್ತು. ಸರಿ ಆಗ ತಾನೆ ಒಂದು ಹೊಸ ಭಾಷೆಯನ್ನ ಕಲಿಯುತ್ತಿದ್ದೆಯಾದ್ದರಿಂದ ಸಾಕಷ್ಟು ಉತ್ಸಾಹ ಇರುತ್ತಿತ್ತು. ಅದರಲ್ಲೂ ಆ ಹೊತ್ತಿಗೆ ಹಿಂದಿ ಸ್ವಲ್ಪ ಗೊತ್ತಿದ್ದರಿಂದ ಸಂಸ್ಕೃತ ಕಲಿಯುವುದು ಒಂದು ತರಹ ಮಜವೆ ಆಗಿತ್ತು. ನನ್ನ ಮೆಚ್ಚಿನ ಸೆಕ್ಷನ್ ಅಂದರೆ ಪದ್ಯಗಳು ಅದರಲ್ಲೂ ಶುಭಾಷಿತಗಳು. ಸುಮಾರು ಶುಭಾಷಿತಗಳು ಸಾಕಷ್ಟು ವರ್ಷಗಳ ಕಾಲ ಜ್ನ್ಯಾಪಕವಿರುತ್ತಿತ್ತು. ಅದು ಸರಿ, ಇತ್ತೀಚೆಗೆ ಸುಮಾರು ಮರೆತು ಹೋಗಿ, ಪೂರ್ತಿಯಾಗಿ ಸಿಗಬಹುದಾದಂತ ರಿಸೋರ್ಸ್‌ಗಳನ್ನ ಹುಡುಕುತ್ತಿದ್ದೇನೆ. ಹೀಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಈ ಒಂದು ವೆಬ್ ಸೈಟ್ ಬೆಳಕಿಗೆ ಬಂತು. ಬೆಂಗಳೂರಿನ ಪ್ರಶಾಂತ್ ಕೋಟರವರು ಬಹಳಷ್ಟು ಶುಭಾಷಿತಗಳನ್ನ ಸಂಗ್ರಹಿಸಿದ್ದಾರೆ. ದಿನಕ್ಕೊಂದು ಶುಭಾಷಿತವನ್ನ ಪಬ್ಲಿಷ್ ಮಾಡುವುದನ್ನ ವಾಡಿಕೆಯಲ್ಲಿಟ್ಟಿದ್ದಾರೆ. ಸೊಗಸೆಂದರೆ ಶುಭಾಷಿತದೊಂದಿಗೆ ಅವುಗಳ ಅರ್ಥಗಳನ್ನ ಕೂಡ ಅಲ್ಲಿ ಕಾಣಬಹುದು. ನಿಮಗೆ ಶುಭಾಷಿತಗಳ ಆಸಾಕ್ತಿಇದ್ದರೆ ಇಲ್ಲಿ ಹೋಗಿ ನೋಡಿ.
url: http://www.geocities.com/prashanth_k_blr/Subhashitani/index.html 

– ರಾಮ್
{technorati Tag: Sanskrit, language}

« Newer PostsOlder Posts »

Create a free website or blog at WordPress.com.