ಈರುಳ್ಳಿಗೆ ಬೆಳ್ಳುಳ್ಳಿಗೆ ಬೇರೆ ಬೇರೆ ಹೆಸರುಗಳಿವೆ. ಕೆಲವೊಮ್ಮೆ ಮನೆಯಲ್ಲಿ ನಾವು ಕೆಂಪು ಗೆಡ್ಡೆ , ಬಿಳೀದು ಅಂತ ಹೇಳಿದ್ದ ನೆನಪು ಇದೆ. ಇತ್ತೀಚೆಗಷ್ಟೇ ಕೃಷ್ಣಾವಲಂ ಅಂತಹ ಒಂದು ಪದ ಕೇಳಿದೆ. ಇದು ತುಳಸೀದಾಸರ ಅಭಂಗ್-ಗಳಲ್ಲಿ ಕೂಡ ಉಲ್ಲೇಖವಾಗಿದೆಯಂತೆ. ಹೆಸರೇನೋ ಚೆನ್ನಾಗಿದೆ ಅನ್ನಿಸಿತು.
ಈರುಳ್ಳಿಗೆ ಕೃಷ್ಣಾವಲಂ ಅಂತ ಹೆಸರು ಹೇಗೆ ಬಂದಿತು?
ವಿಷ್ಣುವಿನ ನಾಲ್ಕು ಕೈಗಳಲ್ಲಿ ಇರುವ ಅಸ್ತ್ರಗಳ ವಿವರಣೆ ಇದ್ರಲ್ಲಿ ಸಿಗುತ್ತದೆ. ಸಾಮಾನ್ಯವಾಗಿ ವಿಷ್ಣುವಿನ ಕೈಗಳಲ್ಲಿ ಶಂಖ, ಚಕ್ರ, ಗಧಾ ಹಾಗು ಕಮಲ ಇರುವುದನ್ನು ನೋಡಿರಬಹುದು. ಈ ಒಂದು ಈರುಳ್ಳಿಯಲ್ಲಿ ಈ ನಾಲ್ಕನ್ನೂ ನೋಡಬಹುದು.
೧. ಈರುಳ್ಳಿಯನ್ನು longitudeನಲ್ಲಿ ಕತ್ತರಿಸಿ, ಮಧ್ಯದಲ್ಲಿನ ವಾಟೆ / ತಿರುಳನ್ನು ತೆಗೆದರೆ ಅದರಲ್ಲಿ ಶಂಖುವಿನ ಆಕಾರ ಕಾಣಿಸುತ್ತದೆ.
೨. ಈರುಳ್ಳಿಯನ್ನು ಅಡ್ಡವಾಗಿ ಕತ್ತರಿಸಿದರೆ (slice) , ಚಕ್ರಾಕಾರ ಕಾಣಿಸುತ್ತದೆ.
೩. ಈರುಳ್ಳಿಯನ್ನು ತಲೆ ಕೆಳಗೆ ಮಾಡಿ ಮೊಳಕೆ / ತೆನೆ ಬರುವ ಕಡೆಯಿಂದ ಕೈಯಲ್ಲಿ ಹಿಡಿದುಕೊಂಡರೆ ಗಧೆಯ ಆಕೃತಿ ಕಾಣ ಸಿಗುವುದು.
೪. ಇನ್ನು ಕಮಲ. ನೀವು ಬಹುಶಃ ಇದನ್ನ ರೆಸ್ಟೋರಂಟುಗಳಲ್ಲಿ ಸಲಾಡ್ ತೆಗೆದುಕೊಂಡಾಗ ಗಮನಿಸಿರಬಹುದು. ಲಾಂಜಿಟ್ಯೂಡಿನಲ್ಲಿ ಹಲವು ಸಲ್ಲ ಅರ್ಧ depth ಕತ್ತರಿಸಿ, ಅದರ ಪದರಗಳನ್ನು ಬಿಡಿಸಿದರೆ ಕಮಲದ ಆಕೃತಿಯನ್ನು ನಿರ್ಮಿಸಬಹುದು.
ಇರಲಿ. ಹಾಗೆ ಹಿಂದಿನ ಅಭಂಗ್ ಹಾಡುಗಳಲ್ಲಿ ಕೆಲವು ಗ್ರಂಥಗಳಲ್ಲಿಯೂ ಕೂಡ ಇದರ ಉಲ್ಲೇಖ ಇದೆ ಎಂದು ಕೇಳಿ ಅಚ್ಚರಿಯಾಯಿತು.
ಅಂದಿನಿಂದ , ಹಲವುಕಡೆ ಈರುಳ್ಳಿಯನ್ನು ಕೃಷ್ಣಾವಲಂ ಎಂದು ಕರೆದಿದ್ದಾರೆ.
ಏನೇ ಹೇಳಿ , ಈರುಳ್ಳಿಗೆ ಕೃಷ್ಣಾವಲಂ ಅನ್ನೋ ಹೆಸರು ಇಷ್ಟವಾಯಿತು. ಇನ್ನು ಮುಂದೆ ನಾವು ಈರುಳ್ಳಿ ತಿನ್ನೋದಿಲ್ಲ ಅಥವಾ ಈರುಳ್ಳಿ ನಡೆಯುತ್ತೆ ಪರವಾಗಿಲ್ಲ ಅನ್ನೋರಿಗೆ, ಕೃಷ್ಣಾವಲಂ ಉಪಯೋಗಿಸುತ್ತೇವೆ ಅಂತ ಹೇಳಬಹುದು 🙂
ಚಿತ್ರ : ಅಂತರ್ಜಾಲ ಕೃಪೆ
