ಏರೋಪ್ಲೇನ್ ಬಾಣಲೆ
[ನಗೆ ಹನಿ]
ನಾವು ಈಗೊಂದು ೮ ತಿಂಗಳ ಮುಂಚೆ ಬೆಂಗಳೂರಿಗೆ ಹೋಗಿದ್ದೆವು. ನನ್ನಾಕೆ ಇಲ್ಲಿ ಮನೆಗೆ ಬೇಕಾದ ವಸ್ತುಗಳನ್ನ ಖರೀದುಸಿತ್ತಿದ್ದಳು. ಹೀಗೆ ನಮಗೆ ಗೊತ್ತಿರುವವರ ಮನೆಗೊಮ್ಮೆ ಹೋಗಿದ್ದೆವು. ಅಲ್ಲಿ ಒಂದು ಬಾಣಲೆ ಕಣ್ಣಿಗೆ ಬಿತ್ತು. ಬಹಳ ಎಫ಼ಿಶಿಯಂಟ್‌ಆದ ಬಾಣಲೆ ಎಂದರು ಆ ಮನೆಯವರು. ಸರಿ, ಅದರ ಮೇಲೆ ನನ್ನಾಕೆಯ ಕಣ್ಣು ಬಿತ್ತು. ಅದು ಎಂಥ ಬಾಣಲೆ? ಅದರ ಹೆಸರೇನು? ಎಲ್ಲಿ ಸಿಗುತ್ತದೆ? ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಸುರಿಮಳೆಯೇ ಆಯಿತು. ಸರಿ, ವಿಷಯ ಸಂಗ್ರಸಿದ್ದು ಆಯಿತು. ತಾನು ಆ ಏರಿಯದಲ್ಲಿರುವ ಅಂಗಡಿಗಳಿಗೆಲ್ಲಾ ಒಂದು ವಿಸಿಟ್ ಮಾಡುವ ಪ್ಲಾನಿತ್ತಂತೆ. ನನ್ನ ಜೊತೆ ಮೋಟಾರ್ ಸೈಕಲ್ಲಿನಲ್ಲಿ ಓಡಾಡಿದ್ದರಿಂದ ಅಲ್ಲೆಲ್ಲಾ ಹೋಗುವ ಪುರ್ಸೊತ್ತು ಇರಲಿಲ್ಲ. ಎನಿವೇಸ್, ನಾವು ಅಲ್ಲಿಂದ ಅಮೇರಿಕಕ್ಕೆ ಹೊರಡುವ ದಿನ ನನ್ನ ತಮ್ಮ ಹಾಗು ನನ್ನಾಕೆ ಇಬ್ಬರೊ ನಮ್ಮ ೫ ತಿಂಗಳ ಕೂಸಿಗೆ ಬಟ್ಟೆ ತರುವುದಕ್ಕಾಗಿ ಹೋಗಿದ್ದರು – ಹಾಗೇ ಮನೆಗೆ ಬಂದಿತ್ತು ಒಂದು ಏರೋಪ್ಲೇನ್ ಬಾಣಲಿ … ಹಹ್ಹಹ್ಹಾ…
ಸರಿ, ಅದನ್ನ ಇಲ್ಲಿಗೆ ತಂದಿದ್ದು ಆಯಿತು. ತಾನು ಹೇಗೆ ಉಪಯೋಗಿಸುತ್ತಾಳೋ ಗೊತ್ತಿಲ್ಲ, ನಾನು ಅದನ್ನ ಅಕಸ್ಮಾತ್ತಾಗಿ ಉಪಯೋಗಿಸಿದಾಗಲೆಲ್ಲಾ ಅಥವ ಅಡುಗೆ ಮನೆಯಲ್ಲಿ ಆ ಬಾಣಲಿಯಲ್ಲಿಟ್ತುರುವ ತಿಂಡಿ ಕದಿಯಲು ಹೋದಾಗಲೆಲ್ಲಾ ಕೈ ಸುಟ್ಟಿಕೊಳ್ಲುತ್ತೇನೆ. ಅದರ ಎರಡು ಕಿವಿ(ಹಿಡಿ)ಗಳಿಗೆ ಇನ್ಸುಲೇಷನ್ ಇಲ್ಲ ಇಡೀ ಬಾಣಲಿ ಬಿಸಿಯಾಗಿ ಹೋಗಿರತ್ತೆ. ಬಹುಶಃ ಅದರ ಪರ್ಪಸ್ಸೇ ಅದಾಗಿರಬೇಕು. ಈಗ ಸದ್ಯಕ್ಕೆ ನನ್ನ ಕೈ ಸ್ವಲ್ಪ ಸುಟ್ತಿದೆ ಹಾಗಾಗಿ ಅದರ ಬಗ್ಗೆ ಜ್ನ್ಯಾಪಕ ಬಂತು. ಸುಟ್ಟಾಗ ಅದರ ಮೇಲೆ ಕೋಪ ಮಾಡಿಕೊಂಡು ನಂತರ ಅದನ್ನ ತಂದ ಬಗೆಯನ್ನು ಜ್ನ್ಯಾಪಿಸಿಕೊಂಡು ನಕ್ಕಿದ್ದೂ ಉಂಟು.
ಹಹ್ಹಹ್ಹಾ…