kannada

November 3, 2007

ಕನ್ನಡ – Mommy, hold my ಕೈ

Filed under: ಇತ್ಯಾದಿ, Language - ಭಾಷೆ — kannada @ 9:06 am

ನಮ್ಮ ಎರಡು ವರ್ಷದ ಮಗು ಇತ್ತೀಚೆಗೆ ಕನ್ನಡ ಹಾಗೂ ಇಂಗ್ಲೀಷು ಎರಡೂ ಅರ್ಥ ಮಾಡಿಕೊಳ್ಳುವುದೂ ಹಾಗೂ ಮಾತನಾಡುವುದು ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ. ಹಾಗಾಗಿ ನಾವು ಹಲವಾರು ಪದಗಳನ್ನ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಹೇಲುತ್ತೇವೆ – ಹಾಗಾಗಿಯಾದರೂ ಅವಳಿಗೆ ನಮ್ಮ ಮಾತೃ ಭಾಷೆ ಕನ್ನಡದ ಅಭಿಮಾನ ಕಂಡುಬರುವುದೆಂಬುದು ಒಂದು ಆಶಯಹೀಗಿರುವಲ್ಲಿ, ತಾನು ಇಂಗ್ಲೀಷಿನಲ್ಲಿ ಏನಾದರೂ ಹೆಳಿಧರೆ, ಅದನ್ನ ನಾವು ಕನ್ನಡದಲ್ಲಿ ಹೇಳು ಎಂಬುದು ವಾದಿಕೆಯಾಗಿಹೋಗಿದೆ. ಇಂತಹ ಒಂದು ಸನ್ನಿವೆಷ.

ವಿ:       Mommy, hold my hands!
ಅಮ್ಮ: ವಿ, ಅದನ್ನೇ ಕನ್ನಡದಲ್ಲಿ ಹೇಳು ಮಗು.
ವಿ:       ಕನ್ನಡ – Mommy, hold my ಕೈ!!

ಎಂದು ಹೇಳಿಬಿಡುವುದೇ?

ಕನ್ನಡದ ಹಿರಿಮೆ

Filed under: Language - ಭಾಷೆ — kannada @ 8:49 am

ಇತ್ತೀಚೆಗೊಂದು ಕನ್ನಡದ ಹಿರಿಮೆಯ ಬಗ್ಗೆ ಒಂದು ಮೈಲ್ ಬಂಧಿತ್ತುಅಚ್ಚರಿಯೆಂದರೆ ಕನ್ನಡ ಎಂಬುವ ಪದವೊಂದು ಬಿಟ್ಟು ಮಿಕ್ಕೆಲ್ಲ ಅಕ್ಷರಗಳೂ ಇಂಗ್ಲೀಷಿನದ್ಡಾಗಿತ್ತು.

is the third oldest language of India . ( After . . Sanskrit & Tamil )
is as old as 2000 years.
is 99.99% perfect – logically and scientifically.

……

April 17, 2007

ಶುಭಾಷಿತ

Filed under: Language - ಭಾಷೆ, sanskrit — kannada @ 8:28 pm

 

ಶುಭಾಷಿತಗಳನ್ನ ಯಾವುದೋ ಪರ್ಪಸ್ ಮೇಲೆ ಬರೆದಿರುತ್ತಾರೆವೆಂಬುದು ನನ್ನ ಅನಿಸಿಕೆ. ಅವುಗಳನ್ನ ಒಳ್ಳೆ ಅರ್ಥಕ್ಕಾಗಿಯೇ ಬರೆದಿರುತ್ತರೆಂಬುದು ಕೂಡ ಒಂದು ನಂಬಿಕೆ. ಏನೇ ಆದರೂ, ಅದನ್ನ ಅರ್ಥ ಮಾಡಿಕೊಳ್ಳುವುದರ ಮೇಲೆ ಆ ಶುಭಾಷಿತಗಳು ಏನನ್ನು ಕನ್ವೇ ಮಾಡುತ್ತವೆಂದು ಯೋಚಿಸಬೇಕಾಗುತ್ತೆ. ಇತ್ತೆಚೆಗೆ ನಾನು ಈ ಶುಭಾಷಿತವನ್ನ ಗಮನಿಸಿದೆ.

ಪುನರ್ ವಿತ್ತಂ ಪುನರ್ ಮಿತ್ರಂ ಪುನರ್ ಭಾರ್ಯಾ ಪುನರ್ ಮಹೀ!

ಏತತ್ ಸರ್ವಂ ಪುನರ್ ಲಭ್ಯಂ ನ ಶರೀರಂ ಪುನ: ಪುನ: ||

ಈ ಶುಭಾಷಿತದ ಪ್ರಕಾರ “ಸುಮಾರೆಲ್ಲವನ್ನೂ ಮತ್ತೊಮ್ಮೆ ಪಡೆಯಬಹುದು – ಧನ, ಮಿತ್ರರು, ಪತ್ನಿ, ಭೂಮಿ, ಇತ್ಯಾದಿ ಆದರೆ ತನ್ನ ದೇಹವನ್ನ ಮಾತ್ರ ಮರಳಿ ಪಡೆಯಲು ಸಾಧ್ಯವಿಲ್ಲ” –> ಇದರಲ್ಲಿ ಒಂದನ್ನ ನಾನು ಖಂಡಿಸುತ್ತೇನೆ. ಧನವನ್ನ ಮತ್ತೆ ಸಂಪಾದಿಸಬಹುದು ಸರಿ, ಮಿತ್ರರು ಒಬ್ಬರಲ್ಲದಿದ್ದರೆ ಮತ್ತೊಬ್ಬರು ಎನ್ನುವ ಹಾಗೆ ಬೇರೆ ಸ್ನೇಹಿತರನ್ನ ಮಾಡಿಕೊಳ್ಳಬಹುದು, ಭೂಮಿ ಮತ್ತೆ ನೀರು ಪಾಲಾಗುವ ಸ್ಂಭವ ಒಂದು ಬಿಟ್ಟು ಮತ್ತೆ ಖರೀದಿಸಬಹುದು; ಆದರೆ ಒಮ್ಮೆ ಕಳೆದ ಪತ್ನಿಯನ್ನ ಮತ್ತೆ ಪಡೆಯಲು ಸಾಧ್ಯವಿಲ್ಲ – ನನಗನಿಸುವ ಹಾಗೆ ಇದೂ ಕೂಡ ಅರ್ಥ ಮಾಡಿಕೊಂಡಂತೆ ಹೋಗುತ್ತೆ. ಅದೇ ಪತ್ನಿಯನ್ನ ಮರಳಿ ಪಡೆಯುವುದೇ ಅಥವ ಬೇರೆಯೊಬ್ಬರನ್ನ ಮದುವೆ ಮಾಡಿಕೋಳ್ಳುವ ಅರ್ಥವೆ? ಅಥವ ಡಿವೋರ್ಸ್ ಆಗಿರುವ ಪತ್ನಿಯನ್ನ ಮತ್ತೆ ಸಮಾಧಾನಿಸಿ ಕರೆತರುವುದೆ? ಅಥವ ಬೇರೆ ಏನಾದರೂ ಅರ್ಥವೆ?

 

 

August 16, 2006

ಕನ್ನಡ ವರ್ಡ್‌ಪ್ರೆಸ್

Filed under: ಕನ್ನಡ - Kannada, Language - ಭಾಷೆ — kannada @ 8:15 am

ಕನ್ನಡ ವರ್ಡ್‌ಪ್ರೆಸ್

ನನಗೆ ತಿಳಿದ ಮಟ್ಟಿಗೆ ವರ್ಡ್‌ಪ್ರೆಸ್‌ನವರದ್ದು ಇಂಗ್ಲೀಷ್ ಬ್ಲಾಗ್ ಇತ್ತು, ಆದರೂ ಬೇರೆ ಭಾಷೆಗಳಲ್ಲಿ ಯೂನಿಕೋಡ್ / ಬೇರೆ ಭಾಷೆಗಳಲ್ಲಿ ಬ್ಲಾಗ್ ಪಬ್ಲಿಷ್ ಕೂಡ ಆಗುತ್ತಿದ್ದವು. ನನಗೆ ಉತ್ಸಾಹ ತಂದದ್ದೇನೆಂದರೆ ಬೇರೆ ಬೇರೆ ಭಾಷೆಗಳಿಗೆ ಅದರದ್ದೇ ಆದ ಯು ಆರ್ ಎಲ್ ಕೂಡ ಇವೆ. ಈ ಒಂದು ಅಂಶ ಸುಮಾರು ಮೊದಲಿಂದಲೇ ಇದ್ದರೂ ಇರಬಹುದು ಆದರೆ ನಾನು ಈಗ ತಾನೇ ಗಮನಿಸಿದೆ. ಅದರಲ್ಲೂ ಉತ್ಸಾವೆಂದರೆ ಕನ್ನಡ ಬ್ಲಾಗ್ ಅಲ್ಲಿ ಹಾಟ್ ಲಿಸ್ಟ್‌ನಲ್ಲಿ ಒಂದಾಗಿತ್ತು 🙂

May 19, 2006

ಪತ್ರ ಬರೆಯುವ ಅಭ್ಯಾಸ

Filed under: ಇತ್ಯಾದಿ, Language - ಭಾಷೆ — kannada @ 8:45 am

ಪತ್ರ ಬರೆಯುವ ಅಭ್ಯಾಸ

ಹಲವಾರು ವರ್ಷಗಳ ಹಿಂದೆ ನಾನು ನನ್ನ ಪೇರೆಂಟ್ಸ್‌ಗೆ ಪತ್ರ ಬರೆಯುತ್ತಿದ್ದು ವಾಡಿಕೆಯಲ್ಲಿತ್ತು. ಪತ್ರ ಬರೆಯುವುದೆಂದರೆ, ಲೇಖನಿ ಕಾಗದ – ಇದೇ ನನ್ನ ಮಾಧ್ಯಮವಾಗಿತ್ತು. ಆ ಸಮಯದಲ್ಲಿ ಕೀ ಬೋರ್ಡು ಮಾಪಿಂಗ್ ಒಂದಿತ್ತೆನಿಸುತ್ತೆ. ಎಷ್ಟೋ ಸರ್ತಿ ನನ್ನ ಸಹೋದರನನ್ನು ಪದೇ ಪದೇ ಅಂತಹದೊಂದನ್ನ ಪತ್ತೆ ಹಚ್ಚುವುದಕ್ಕೆ ಗೋಳಾಡಿಕೊಂಡದ್ದೂ ಇದೆ. ಹೀಗೇ ಒಂದು ದಿನ ಬರಹ ಟ್ರಾನ್ಸ್‌ಲಿಟರೇಷನ್ ಸಾಫ಼್ಟ್‌ವೇರ್ ಬಗ್ಗೆ ಕೇಳಿದೆ. ಆ ದಿನಗಳಲ್ಲಿ ಸಾಕಷ್ಟು ಕಾಲ ಟೈಪ್ ಮಾಡಿದ್ದೂ ಮಾಡಿದ್ದೆ. ಹಾಗೆ ಪ್ರಾರಂಭವಾದ ನನ್ನ ಪತ್ರ ಬರೆಯುವ ವಿದಾನ ಈಗಲೂ ಕೂಡ ವರ್ಷಕ್ಕೆ ಒಂದು-ಎರಡು ಸಾರಿ ಹಾಗಿದೆ. ಅಮ್… ಈಗಂತೂ ಕನ್ನಡದಲ್ಲಿ ಪತ್ರ ಬರೆಯುವುದೆಂದರೆ ಸಾಕಷ್ಟು ಕಾಲ ಕೊಡಬೇಕು. ಒಂದು ಪತ್ರವನ್ನ ಸುಮಾರು ೨-೩ ವಾರಗಳಲ್ಲಿ ಬರೆಯುತ್ತೇನೆ. ಒಹ್! ವೈಟ್ ಪೇಪರ್ ಅಥವ ಕಥೆ ಕಾದಂಬರಿ ಅಲ್ಲ, ಬರೀ ಒಂದು ಪುಟ ಕನ್ನಡ ಪತ್ರ. ನಾನು ಪ್ರಾರಂಭ ಮಾಡಿ ಪತ್ರ ಮುಗಿಸೋ ಹೊತ್ತಿಗೆ ಸುಮಾರು ವಿಷಯಗಳು ಹಳೆಯದಾಗಿ ಹೋಗಿರತ್ತೆ. ಹಹ್ಹಹ್ಹಾ…

(more…)

May 2, 2006

ಶುಭಾಷಿತಗಳು (shubhaaShita)

Filed under: Language - ಭಾಷೆ, sanskrit — kannada @ 6:03 am

ಶುಭಾಷಿತಗಳು

 

ನಾನು ಎಂಟನೆ ತರಗತಿಯಲ್ಲಿದ್ದಾಗ ಸಂಸ್ಕೃತ ಮೂರನೆ ಭಾಷೆ (third language )ಆಗಿತ್ತು. ಸರಿ ಆಗ ತಾನೆ ಒಂದು ಹೊಸ ಭಾಷೆಯನ್ನ ಕಲಿಯುತ್ತಿದ್ದೆಯಾದ್ದರಿಂದ ಸಾಕಷ್ಟು ಉತ್ಸಾಹ ಇರುತ್ತಿತ್ತು. ಅದರಲ್ಲೂ ಆ ಹೊತ್ತಿಗೆ ಹಿಂದಿ ಸ್ವಲ್ಪ ಗೊತ್ತಿದ್ದರಿಂದ ಸಂಸ್ಕೃತ ಕಲಿಯುವುದು ಒಂದು ತರಹ ಮಜವೆ ಆಗಿತ್ತು. ನನ್ನ ಮೆಚ್ಚಿನ ಸೆಕ್ಷನ್ ಅಂದರೆ ಪದ್ಯಗಳು ಅದರಲ್ಲೂ ಶುಭಾಷಿತಗಳು. ಸುಮಾರು ಶುಭಾಷಿತಗಳು ಸಾಕಷ್ಟು ವರ್ಷಗಳ ಕಾಲ ಜ್ನ್ಯಾಪಕವಿರುತ್ತಿತ್ತು. ಅದು ಸರಿ, ಇತ್ತೀಚೆಗೆ ಸುಮಾರು ಮರೆತು ಹೋಗಿ, ಪೂರ್ತಿಯಾಗಿ ಸಿಗಬಹುದಾದಂತ ರಿಸೋರ್ಸ್‌ಗಳನ್ನ ಹುಡುಕುತ್ತಿದ್ದೇನೆ. ಹೀಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಈ ಒಂದು ವೆಬ್ ಸೈಟ್ ಬೆಳಕಿಗೆ ಬಂತು. ಬೆಂಗಳೂರಿನ ಪ್ರಶಾಂತ್ ಕೋಟರವರು ಬಹಳಷ್ಟು ಶುಭಾಷಿತಗಳನ್ನ ಸಂಗ್ರಹಿಸಿದ್ದಾರೆ. ದಿನಕ್ಕೊಂದು ಶುಭಾಷಿತವನ್ನ ಪಬ್ಲಿಷ್ ಮಾಡುವುದನ್ನ ವಾಡಿಕೆಯಲ್ಲಿಟ್ಟಿದ್ದಾರೆ. ಸೊಗಸೆಂದರೆ ಶುಭಾಷಿತದೊಂದಿಗೆ ಅವುಗಳ ಅರ್ಥಗಳನ್ನ ಕೂಡ ಅಲ್ಲಿ ಕಾಣಬಹುದು. ನಿಮಗೆ ಶುಭಾಷಿತಗಳ ಆಸಾಕ್ತಿಇದ್ದರೆ ಇಲ್ಲಿ ಹೋಗಿ ನೋಡಿ.
url: http://www.geocities.com/prashanth_k_blr/Subhashitani/index.html 

– ರಾಮ್
{technorati Tag: Sanskrit, language}

Create a free website or blog at WordPress.com.