kannada

April 11, 2006

ಇನ್ನೊಂದು ಕನ್ನಡ ಹಾಡುಗಳ ರೆಪಾಸಿಟರಿ (Kannada songs)

Filed under: ಹಾಡು ಹಸೆ - Music — kannada @ 5:58 am

ಇನ್ನೊಂದು ಕನ್ನಡ ಹಾಡುಗಳ ರೆಪಾಸಿಟರಿ

ಅಂತರ್ಜಾಲದಲ್ಲಿ ಇನ್ನೊಂದು ಕನ್ನಡ ಹಾಡುಗಳ ವೆಬ್ ಸೈಟ್ ಇದೆ. ಕೆಲವು ತಿಂಗಳುಗಳ ಹಿಂದೆ ಅದನ್ನ ನೋಡಿದ್ದೆ ಹಾಗೂ ಹಾಡುಗಳನ್ನ ಪ್ಲೆ ಮಾಡಿದ್ದೆ. ಅಲ್ಲೂ ಸಹ ಸಾಕಷ್ಟು ಕಾಟೆಗೋರಿಗಳಲ್ಲಿ ಹಾಡು ಹಸೆಗಳು ಇವೆ. ನನಗೆ ಇಷ್ಟವಾದ ಕೆಲವು ಬಗೆಗಳು: ಜಾನಪದ ಹಾಡುಗಳು, ಮಕ್ಕಳ ಹಾಡುಗಳು (ಇತ್ತೀಚೆಗೆ ನಮ್ಮ ೧೪ ತಿಂಗಳ ಮಗುವಿಗಾಗಿ ಇದನ್ನ ಆಲಿಸುತ್ತೇವೆ), ಸಿನಿಮಾ ಹಾಡುಗಳು, ಇತ್ಯಾದಿ ಇತ್ಯಾದಿ. ಬೆಂಗಳೂರಿನಿಂದ ದೂರವಿದ್ದು ಇಂತಹ ಒಂದು ಅವಕಾಶವಿರುವುದು ನಿಜವಾಗಿಯೂ ಒಂದು ಉಪಕಾರಿ. ಆಲಿಸಿ ನೋಡಿ… ಉದ್ಭವ.ಕಾಮ್

 

April 7, 2006

ಕನ್ನಡ ಆಡಿಯೊ (kannada audio)

Filed under: ಹಾಡು ಹಸೆ - Music — kannada @ 7:54 am

ಕನ್ನಡ ಆಡಿಯೊ

ರೇಡಿಯೋ ಶ್ಟ್ರೀಮ್‌ಲೈನ್ – ಕನ್ನಡ ಹಾಡುಗಳನ್ನ ಇನ್ನೊಂದು ಅಂತರ್ಜಾಲದ ಸೈಟ್‌ನಿಂದ ಕೇಳಬಹುದು. ನನಗೆ ಅಷ್ಟಾಗಿ ಗೊತ್ತಿಲ್ಲವಾದರೂ ಅದರಲ್ಲಿ ವಿದ ವಿದವಾದ ಹಾಡುಗಳನ್ನ ನಿಗದಿತ ಸಮಯದಲ್ಲಿ ರಿಲೆ (ಪ್ರಸಾರ) ಮಾಡಿರುತ್ತೆ. ಹಾಡುಗಳನ್ನ ನಿಮ್ಮದೆ ಆದ ವಿಂಡೋಸ್ ಮೀಡಿಯ ಪ್ಲೇಯರ್ ಅಠವ ರಿಯಲ್ ಆಡಿಯೊ ಮೂಲಕ ಕೇಳಬಹುದು. ಪ್ರಯತ್ನಿಸಿ ನೋಡಿ. 🙂

Create a free website or blog at WordPress.com.