ಪ್ರಜಾವಾಣಿ
ನಾನು ಬೆಂಗಳೂರಿನಲ್ಲಿದ್ದಾಗ ನಮ್ಮ ದಿನಚರಿ ಪ್ರಾರಂಭವಾಗುತ್ತಿದ್ದದ್ದು ಒಂದು ಲೋಟ ಕಾಫಿ ಮತ್ತು ದಿನ ಪತ್ರಿಕೆಯಿಂದ. ಅದರಲ್ಲೂ ಭಾನುವಾರಗಳಂದು ನಾನು ಬೆಳಿಗ್ಗೆ ಏಳು ಘಂಟೆಗೆ ಎದ್ದು ಮುಖ ತೊಳೆದು ನನ್ನ ಅಮ್ಮ ಕಾಫಿ ತ್ಂದುಕೊಡುವುದನ್ನೇ ಕಾಯುತ್ತಿರುತ್ತಿದ್ದೆ. ದಿನಸಂಚಿಕೆ ಆಗಾಗಲೇ ಬಂದಿರುತ್ತಿತ್ತು. ಕೂಡಲೇ ಒಂದು ಲೋಟ ಕಾಫಿ ಹಾಗೂ ದಿನಪತ್ರಿಕೆಯನ್ನು ಹಿಡಿದು ಸುಮಾರು ಒಂದರಿಂದ ಎರಡು ಗಂಟೆಗಳ ಕಾಲ ಕುಳಿತಿರುತ್ತಿದ್ದೆ.
ಸರಿ – ಈಗ ಎಷ್ಟೆಲ್ಲಾ ವಿಚಾರ ಬಂದಿದ್ದು ನಾನು ಪ್ರಜಾವಾಣಿಯ ಬಗ್ಗೆ ಬರೆಯಲು ಹೋದದ್ದಕ್ಕೆ. ಪ್ರಜಾವಾಣಿ ಕರ್ಣಾಟಕದ ಬಹು ಹೆಸರಾಂತ ದಿನಪತ್ರಿಕೆ. ಅದರಲ್ಲೂ ಬೆಂಗಳೂರಿನಲ್ಲಿ ಬಹಳ ಹೆಸರುವಾಸಿ. ಯಾವುದೇ ಕನ್ನಡಿಗನಾದರೂ ಪ್ರಜಾವಾಣಿಯ ಹೆಸರನ್ನ ಕೇಳದಿರಕ್ಕಿಲ್ಲ.
ಈಗಲೂ ಇಂಟರ್ನೆಟ್ ಆನ್-ಲೈನ್ ಮೂಲಕ ಈ ಪತ್ರಿಕೆಯನ್ನ ನನ್ನ ಹಾಗೆ ಬಹಳಷ್ಟು ಕನ್ನಡಿಗರು ಅದರಲ್ಲೂ ಬೆಂಗಳೂರಿನಿಂದ ದೂರವಿರುವವರು ಸಾಮಾನ್ಯವಾಗೆ ಓದುತ್ತಾರೆಂದು ಕೇಳಿದೆ.
ನಮಸ್ತೆ