ನಾನು ಇತ್ತೀಚೆಗೆ ಊಟ ತಿಂಡಿ ಬ್ಲಾಗ್ ಪ್ರಾರಂಭಿಸಿ ಕನ್ನಡ ಬ್ಲಾಗ್ನಲ್ಲಿ ಕಡಿಮೆ ಆಗಿ ಹೋಗಿದೆ. ಹಾಗಂತ ಊಟ ತಿಂಡಿ ನಲ್ಲಿ ತಿನಿಸುಗಳನ್ನ ಹಾಕುವಷ್ಟು ಕೆಲ್ಸ ಅಂತ ಕೂಡ ಅಲ್ಲ. ಅದ್ರಲ್ಲೂ consistent ಆಗಿ update ಮಾಡಿಲ್ಲ. ಬಹುಶಃ ಬ್ಲಾಗ್ಗಳು ಬರೆಯುವಷ್ಟು ಸಮಯ ಮಾಡಿಕೊಳ್ಳುತಿಲ್ಲವೆನಿಸುತ್ತೆ. http://ootathindi.wordpress.com
March 22, 2010
October 30, 2006
ವಚನ
ಕಳಬೇಡ ಕೊಲಬೇಡ
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ
August 16, 2006
ಕನ್ನಡ ವರ್ಡ್ಪ್ರೆಸ್
ನನಗೆ ತಿಳಿದ ಮಟ್ಟಿಗೆ ವರ್ಡ್ಪ್ರೆಸ್ನವರದ್ದು ಇಂಗ್ಲೀಷ್ ಬ್ಲಾಗ್ ಇತ್ತು, ಆದರೂ ಬೇರೆ ಭಾಷೆಗಳಲ್ಲಿ ಯೂನಿಕೋಡ್ / ಬೇರೆ ಭಾಷೆಗಳಲ್ಲಿ ಬ್ಲಾಗ್ ಪಬ್ಲಿಷ್ ಕೂಡ ಆಗುತ್ತಿದ್ದವು. ನನಗೆ ಉತ್ಸಾಹ ತಂದದ್ದೇನೆಂದರೆ ಬೇರೆ ಬೇರೆ ಭಾಷೆಗಳಿಗೆ ಅದರದ್ದೇ ಆದ ಯು ಆರ್ ಎಲ್ ಕೂಡ ಇವೆ. ಈ ಒಂದು ಅಂಶ ಸುಮಾರು ಮೊದಲಿಂದಲೇ ಇದ್ದರೂ ಇರಬಹುದು ಆದರೆ ನಾನು ಈಗ ತಾನೇ ಗಮನಿಸಿದೆ. ಅದರಲ್ಲೂ ಉತ್ಸಾವೆಂದರೆ ಕನ್ನಡ ಬ್ಲಾಗ್ ಅಲ್ಲಿ ಹಾಟ್ ಲಿಸ್ಟ್ನಲ್ಲಿ ಒಂದಾಗಿತ್ತು 🙂