kannada

January 15, 2008

ಸಂಕ್ರಾಂತಿ ಶುಭಾಷಯಗಳು

Filed under: ಇತ್ಯಾದಿ — kannada @ 5:57 am

ಮಕರ ಸಂಕ್ರಾಂತಿ ಶುಭಾಷಯಗಳು

November 9, 2007

ಅಪ್ಪ ಹೋಗಿ ಮಪ್ಪ-ವೆಂದಾಯಿತು…

Filed under: ಇತ್ಯಾದಿ, ಶಂಭಾಷಣೆ — kannada @ 8:24 am

EwÛÃZÉUÉ £ÀªÀÄä 2.5 ªÀµÀðzÀ ªÀÄUÀÄ vÀ£Àß CªÀÄä£À §½ ºÉÆÃV F ªÀÄÄA¢£À ¸ÀA¨sÁ±ÀuÉ £ÀqɬÄvÀÄ:
«: CªÀÄä ªÉƸÀgÀÄ ªÀĪÀÄäA PÀ®Äì .
£À£ÁßPÉ PÉÊ ©qÀÄ«®èzÉ: «, ¤ªÀÄä¥Àà CzÀ£Àß PÀ°¸ÀÄvÁÛgÉ, CªÀgÀ£Àß PÉüÀªÀÄä
«: (£À£Àß §½ §AzÀÄ) ªÀÄ¥Àà ªÀÄ¥Àà JAzÀ¼ÀÄ
£Á£ÀÄ: (£À£ÀUÀ®èªÉ£ÀÄߪÀAvÉ £À£Àß ¥ÁrUÉ £Á£ÀÄ PÀĽwzÉÝ)
«: ªÀÄ¥Àà ªÀÄ¥Àà, ªÉƸÀgÀÄ ªÀĪÀÄäA PÀ®Äì, ¦èøï! JAzÀÄ PÉÊ »rzÀ¼ÀÄ
 
EAvÀºÀ MAzÉgÀqÀÄ ¸À¤ßªÉñÀUÀ¼ÀÄ £ÀqÉzÁUÀ CjªÁ¬ÄvÀÄ, C¥Àà ºÉÆÃV ªÀÄ¥Àà D¬ÄvÉAzÀÄ 🙂 

November 3, 2007

ಕನ್ನಡ – Mommy, hold my ಕೈ

Filed under: ಇತ್ಯಾದಿ, Language - ಭಾಷೆ — kannada @ 9:06 am

ನಮ್ಮ ಎರಡು ವರ್ಷದ ಮಗು ಇತ್ತೀಚೆಗೆ ಕನ್ನಡ ಹಾಗೂ ಇಂಗ್ಲೀಷು ಎರಡೂ ಅರ್ಥ ಮಾಡಿಕೊಳ್ಳುವುದೂ ಹಾಗೂ ಮಾತನಾಡುವುದು ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ. ಹಾಗಾಗಿ ನಾವು ಹಲವಾರು ಪದಗಳನ್ನ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಹೇಲುತ್ತೇವೆ – ಹಾಗಾಗಿಯಾದರೂ ಅವಳಿಗೆ ನಮ್ಮ ಮಾತೃ ಭಾಷೆ ಕನ್ನಡದ ಅಭಿಮಾನ ಕಂಡುಬರುವುದೆಂಬುದು ಒಂದು ಆಶಯಹೀಗಿರುವಲ್ಲಿ, ತಾನು ಇಂಗ್ಲೀಷಿನಲ್ಲಿ ಏನಾದರೂ ಹೆಳಿಧರೆ, ಅದನ್ನ ನಾವು ಕನ್ನಡದಲ್ಲಿ ಹೇಳು ಎಂಬುದು ವಾದಿಕೆಯಾಗಿಹೋಗಿದೆ. ಇಂತಹ ಒಂದು ಸನ್ನಿವೆಷ.

ವಿ:       Mommy, hold my hands!
ಅಮ್ಮ: ವಿ, ಅದನ್ನೇ ಕನ್ನಡದಲ್ಲಿ ಹೇಳು ಮಗು.
ವಿ:       ಕನ್ನಡ – Mommy, hold my ಕೈ!!

ಎಂದು ಹೇಳಿಬಿಡುವುದೇ?

May 19, 2006

ಪತ್ರ ಬರೆಯುವ ಅಭ್ಯಾಸ

Filed under: ಇತ್ಯಾದಿ, Language - ಭಾಷೆ — kannada @ 8:45 am

ಪತ್ರ ಬರೆಯುವ ಅಭ್ಯಾಸ

ಹಲವಾರು ವರ್ಷಗಳ ಹಿಂದೆ ನಾನು ನನ್ನ ಪೇರೆಂಟ್ಸ್‌ಗೆ ಪತ್ರ ಬರೆಯುತ್ತಿದ್ದು ವಾಡಿಕೆಯಲ್ಲಿತ್ತು. ಪತ್ರ ಬರೆಯುವುದೆಂದರೆ, ಲೇಖನಿ ಕಾಗದ – ಇದೇ ನನ್ನ ಮಾಧ್ಯಮವಾಗಿತ್ತು. ಆ ಸಮಯದಲ್ಲಿ ಕೀ ಬೋರ್ಡು ಮಾಪಿಂಗ್ ಒಂದಿತ್ತೆನಿಸುತ್ತೆ. ಎಷ್ಟೋ ಸರ್ತಿ ನನ್ನ ಸಹೋದರನನ್ನು ಪದೇ ಪದೇ ಅಂತಹದೊಂದನ್ನ ಪತ್ತೆ ಹಚ್ಚುವುದಕ್ಕೆ ಗೋಳಾಡಿಕೊಂಡದ್ದೂ ಇದೆ. ಹೀಗೇ ಒಂದು ದಿನ ಬರಹ ಟ್ರಾನ್ಸ್‌ಲಿಟರೇಷನ್ ಸಾಫ಼್ಟ್‌ವೇರ್ ಬಗ್ಗೆ ಕೇಳಿದೆ. ಆ ದಿನಗಳಲ್ಲಿ ಸಾಕಷ್ಟು ಕಾಲ ಟೈಪ್ ಮಾಡಿದ್ದೂ ಮಾಡಿದ್ದೆ. ಹಾಗೆ ಪ್ರಾರಂಭವಾದ ನನ್ನ ಪತ್ರ ಬರೆಯುವ ವಿದಾನ ಈಗಲೂ ಕೂಡ ವರ್ಷಕ್ಕೆ ಒಂದು-ಎರಡು ಸಾರಿ ಹಾಗಿದೆ. ಅಮ್… ಈಗಂತೂ ಕನ್ನಡದಲ್ಲಿ ಪತ್ರ ಬರೆಯುವುದೆಂದರೆ ಸಾಕಷ್ಟು ಕಾಲ ಕೊಡಬೇಕು. ಒಂದು ಪತ್ರವನ್ನ ಸುಮಾರು ೨-೩ ವಾರಗಳಲ್ಲಿ ಬರೆಯುತ್ತೇನೆ. ಒಹ್! ವೈಟ್ ಪೇಪರ್ ಅಥವ ಕಥೆ ಕಾದಂಬರಿ ಅಲ್ಲ, ಬರೀ ಒಂದು ಪುಟ ಕನ್ನಡ ಪತ್ರ. ನಾನು ಪ್ರಾರಂಭ ಮಾಡಿ ಪತ್ರ ಮುಗಿಸೋ ಹೊತ್ತಿಗೆ ಸುಮಾರು ವಿಷಯಗಳು ಹಳೆಯದಾಗಿ ಹೋಗಿರತ್ತೆ. ಹಹ್ಹಹ್ಹಾ…

(more…)

April 26, 2006

ಹಬ್ಬ ಹರಿದಿನಗಳು

Filed under: ಇತ್ಯಾದಿ — kannada @ 6:23 pm

ಹಬ್ಬ ಹರಿದಿನಗಳು

 

ಸುಮಾರು ಜನರಿಗೆ ಹಬ್ಬ ಹರಿದಿನಗಳ ಹಿನ್ನಲೆ ಆಗಲೀ ಅಥವ ಹಬ್ಬಗಳನ್ನ ಯಾಕೆ ಆಚರಿಸಬೇಕು ಎಂಬುವ ವಿಚಾರ ಗೊತ್ತಿರಲಿಕ್ಕಿಲ್ಲ. ಅದು ಸರಿ, ನಾನು ಶಾಲಾ ದಿನಗಳಲ್ಲಿ ಹಬ್ಬವೆಂದರೆ ಸಕಲ ತಿನಿಸುಗಳನ್ನ ಸವಿಯುವುದು ಒಂದು ಪರ್ಪಸ್ ಆಗಿರುತ್ತಿತ್ತು. ಅಂದಿನ ದಿನ ಬೆಳಗಿನ ಜಾವದಿಂದ ಹಿಡಿದು ಮಧ್ಯಾಹ್ನದವರೆಗೂ ನನ್ನ ಅಪ್ಪ ಅಮ್ಮ ಸಾಕಷ್ಟು ತಿಂಡಿಗಳನ್ನ ಮಾಡಿರುತ್ತಿದ್ದರು. ನಾನು ನನ್ನ ತಮ್ಮ ಊಟದ ಸಮಯಕ್ಕೆ ಕಾಯೂತ್ತಿದ್ದೆವು. ಪೂಜಾದಿಗಳು ಮುಗಿದು ನೈವೇದ್ಯಕ್ಕೆ ರೆಡಿಯಾದ ಕೂಡಲೆ ಅಲ್ಲಿಟ್ಟಿದ್ದ ತಿಂಡಿಗಳನ್ನ ತಿನ್ನುವುದೇ ಒಂದು ಮೋಜಾಗಿತ್ತು.

 

ಏನೇ ಆಗಲೀ ಕೆಲವು ಹಿನ್ನಲೆಗಳನ್ನ ಈಗಲಾದರು ತಿಳಿಯುವುದು ಒಳ್ಳೆಯದು ಅನಿಸುತ್ತೆ. ಇತ್ತೀಚೆಗೆ ಒಂದು ವೆಬ್ ಸೈಟ್ ನೋಡಿದೆ. ಅಲ್ಲಿ ಪೂರ್ತಿಯಲ್ಲದಿದ್ದರೂ ಇಂತಹ ಕೆಲವು ವಿಷಯಗಳನ್ನ ಪಬ್ಲಿಷ್ ಮಾಡಿದ್ದಾರೆ. ಹೋಗಿ ನೋಡಿ

{technorati tag: Indian Festivals}

April 11, 2006

ಉಗಾದಿ ಸಮಾರಂಭ (Ugadi celebration – east side)

Filed under: ಇತ್ಯಾದಿ, ಪರಿಚಯ — kannada @ 6:10 am

ಸಹ್ಯಾದ್ರಿ ಕನ್ನಡ ಸಂಘ

 

ಸಿಯಾಟಲ್ ಕನ್ನಡ ಕೂಟದ ಹೆಸರು ಸಹ್ಯಾದ್ರಿ ಕನ್ನಡ ಸಂಘ. ಕಳೆದ ಎರಡು ವರ್ಷಗಳು ಉಗಾದಿ ಸಮಾರಂಭಕ್ಕೆ ಅಲ್ಲಿ ಹೋಗಿದ್ದೆವು. ಈ ವರ್ಷವೂ ಸಹ ಉಗಾದಿ ಸಮಾರಂಭವನ್ನ ಮೇ ೬ ರಂದು ಏರ್ಪಡಿಸಿದ್ದಾರೆ. ವಿಳಾಸ ಇತ್ಯಾದಿ ವಿಚಾರಗಳಿಗೆ ಇಲ್ಲಿ ನೋಡಿ. – ಸಹ್ಯಾದ್ರಿಕನ್ನಡಸಂಘ.ಕಾಮ್

 

April 7, 2006

ನಿಘಂಟು (ಡಿಕ್ಷ್‌ನರಿ) – Dictionary

Filed under: ಅನುವಾದ, ಇತ್ಯಾದಿ — kannada @ 7:40 am

ನಿಘಂಟು (ಡಿಕ್ಷ್‌ನರಿ)

ಸುಮಾರು ದಿನಗಳ ಹಿಂದೆ ಇಂಗ್ಲೀಷ್-ಕನ್ನಡ ಅರ್ಥಕೋಶವನ್ನ ಹುಡುಕುತ್ತಿದ್ದೆ. ನಾನು ಬೆಂಗಳೂರಿನಲ್ಲಿದ್ದಾಗ ಆಗಾಗ್ಗೆ ಕನ್ನಡ ನಿಘಂಟು ಪುಸ್ತಕವನ್ನ ಉಪಯೋಗಿಸುತ್ತಿದ್ದೆ. ಅದನ್ನ ನಾನು ಈಗಿರುವ ಜಾಗಕ್ಕೆ ತಂದಿಲ್ಲವಾದ್ದರಿಂದ ಅಂತರ್ಜಾಲದಲ್ಲಿ ಹುಡುಕಾಡಿದೆ. ಹೇಗಾದರೂ, ಕೊನೆಗೆ ಒಂದು ಸಿಕ್ಕಿತು. ಬಹುಶಃ ನಿಮಗೂ ಉಪಯೋಗವಾಗಬಹುದು. ಟ್ರೈ ಮಾಡಿ ನೋಡಿ. ಬಹುಶ್ಃ ತಮಗೇನಾದರೂ ಉತ್ತಮವಾದ ಶಬ್ಧಕೋಶ ಸಿಕ್ಕಿದಲ್ಲಿ ನನಗೆ ತಿಳಿಸುವುದನ್ನ ಮರೆಯದಿರಿ 🙂

ಕನ್ನಡ ವೀಕಿಪೀಡಿಯ

Filed under: ಇತ್ಯಾದಿ — kannada @ 7:22 am

 

ನಾನು ಸಾಮಾನ್ಯವಾಗಿ ಇಂಗ್ಲೀಷ್ ವೀಕಿಪೀಡಿಯ ನೋಡುವ ವಾಡಿಕೆ. ಇತ್ತೀಚೆಗೆ ವೀಕಿಪೀಡಿಯ ಬೇರೆ ಭಾಷೆಗಳಲ್ಲಿ ಕೂಡ ಇರುವುದು ಗಮನಿಸಿದ್ದೆ. ಏನೇ ಆದ್ರೂ ನನಗಿನ್ನೂ ಅದರಲ್ಲಿ ಕನ್ನಡ ಪದಗಳನ್ನ ಹುಡುಕುವ ಹಾದಿ ಗೊತ್ತಾಗಿಲ್ಲ – ನಾನಿನ್ನೂ ಹೆಚ್ಚಿಗೆ ಎಕ್ಸ್‌ಪ್ಲೋರ್ ಮಾಡಿಲ್ಲ. ಬಹುಶಃ ತಮಗೇನಾದರೂ ತಿಳಿದಿದ್ದರೆ ಅದರ ಬಗ್ಗೆ ಇಲ್ಲಿ ಕಾಮೆಂಟ್ ಮಾಡುವುದು.

 

 

March 31, 2006

ಉಗಾದಿ ಶುಭಾಷಯಗಳು

Filed under: ಇತ್ಯಾದಿ, Uncategorized — kannada @ 8:53 am

ಉಗಾದಿ ಶುಭಾಷಯಗಳು (ವ್ಯಯ ನಾಮ ಸಂವತ್ಸರ)

 

ಯುಗ ಯುಗಾದಿ ಕಳೆದರೂ ಉಗಾದಿ ಮರಳಿ ಬರುತಿದೆ; ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ – ಹೊಸತು ಹೊಸತು ತರುತಿದೆ

 

March 19, 2006

ಏರೋಪ್ಲೇನ್ ಬಾಣಲೆ

Filed under: ಇತ್ಯಾದಿ, miscellaneous — kannada @ 5:32 am

ಏರೋಪ್ಲೇನ್ ಬಾಣಲೆ

[ನಗೆ ಹನಿ]

ನಾವು ಈಗೊಂದು ೮ ತಿಂಗಳ ಮುಂಚೆ ಬೆಂಗಳೂರಿಗೆ ಹೋಗಿದ್ದೆವು. ನನ್ನಾಕೆ ಇಲ್ಲಿ ಮನೆಗೆ ಬೇಕಾದ ವಸ್ತುಗಳನ್ನ ಖರೀದುಸಿತ್ತಿದ್ದಳು. ಹೀಗೆ ನಮಗೆ ಗೊತ್ತಿರುವವರ ಮನೆಗೊಮ್ಮೆ ಹೋಗಿದ್ದೆವು. ಅಲ್ಲಿ ಒಂದು ಬಾಣಲೆ ಕಣ್ಣಿಗೆ ಬಿತ್ತು. ಬಹಳ ಎಫ಼ಿಶಿಯಂಟ್‌ಆದ ಬಾಣಲೆ ಎಂದರು ಆ ಮನೆಯವರು. ಸರಿ, ಅದರ ಮೇಲೆ ನನ್ನಾಕೆಯ ಕಣ್ಣು ಬಿತ್ತು. ಅದು ಎಂಥ ಬಾಣಲೆ? ಅದರ ಹೆಸರೇನು? ಎಲ್ಲಿ ಸಿಗುತ್ತದೆ? ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಸುರಿಮಳೆಯೇ ಆಯಿತು. ಸರಿ, ವಿಷಯ ಸಂಗ್ರಸಿದ್ದು ಆಯಿತು. ತಾನು ಆ ಏರಿಯದಲ್ಲಿರುವ ಅಂಗಡಿಗಳಿಗೆಲ್ಲಾ ಒಂದು ವಿಸಿಟ್ ಮಾಡುವ ಪ್ಲಾನಿತ್ತಂತೆ. ನನ್ನ ಜೊತೆ ಮೋಟಾರ್ ಸೈಕಲ್ಲಿನಲ್ಲಿ ಓಡಾಡಿದ್ದರಿಂದ ಅಲ್ಲೆಲ್ಲಾ ಹೋಗುವ ಪುರ್ಸೊತ್ತು ಇರಲಿಲ್ಲ. ಎನಿವೇಸ್, ನಾವು ಅಲ್ಲಿಂದ ಅಮೇರಿಕಕ್ಕೆ ಹೊರಡುವ ದಿನ ನನ್ನ ತಮ್ಮ ಹಾಗು ನನ್ನಾಕೆ ಇಬ್ಬರೊ ನಮ್ಮ ೫ ತಿಂಗಳ ಕೂಸಿಗೆ ಬಟ್ಟೆ ತರುವುದಕ್ಕಾಗಿ ಹೋಗಿದ್ದರು – ಹಾಗೇ ಮನೆಗೆ ಬಂದಿತ್ತು ಒಂದು ಏರೋಪ್ಲೇನ್ ಬಾಣಲಿ … ಹಹ್ಹಹ್ಹಾ…

ಸರಿ, ಅದನ್ನ ಇಲ್ಲಿಗೆ ತಂದಿದ್ದು ಆಯಿತು. ತಾನು ಹೇಗೆ ಉಪಯೋಗಿಸುತ್ತಾಳೋ ಗೊತ್ತಿಲ್ಲ, ನಾನು ಅದನ್ನ ಅಕಸ್ಮಾತ್ತಾಗಿ ಉಪಯೋಗಿಸಿದಾಗಲೆಲ್ಲಾ ಅಥವ ಅಡುಗೆ ಮನೆಯಲ್ಲಿ ಆ ಬಾಣಲಿಯಲ್ಲಿಟ್ತುರುವ ತಿಂಡಿ ಕದಿಯಲು ಹೋದಾಗಲೆಲ್ಲಾ ಕೈ ಸುಟ್ಟಿಕೊಳ್ಲುತ್ತೇನೆ. ಅದರ ಎರಡು ಕಿವಿ(ಹಿಡಿ)ಗಳಿಗೆ ಇನ್ಸುಲೇಷನ್ ಇಲ್ಲ ಇಡೀ ಬಾಣಲಿ ಬಿಸಿಯಾಗಿ ಹೋಗಿರತ್ತೆ. ಬಹುಶಃ ಅದರ ಪರ್ಪಸ್ಸೇ ಅದಾಗಿರಬೇಕು. ಈಗ ಸದ್ಯಕ್ಕೆ ನನ್ನ ಕೈ ಸ್ವಲ್ಪ ಸುಟ್ತಿದೆ ಹಾಗಾಗಿ ಅದರ ಬಗ್ಗೆ ಜ್ನ್ಯಾಪಕ ಬಂತು. ಸುಟ್ಟಾಗ ಅದರ ಮೇಲೆ ಕೋಪ ಮಾಡಿಕೊಂಡು ನಂತರ ಅದನ್ನ ತಂದ ಬಗೆಯನ್ನು ಜ್ನ್ಯಾಪಿಸಿಕೊಂಡು ನಕ್ಕಿದ್ದೂ ಉಂಟು.

ಹಹ್ಹಹ್ಹಾ…

Create a free website or blog at WordPress.com.