kannada

August 27, 2006

ಗಣೇಶ ಚತುರ್ಥಿ

Filed under: ಆಚಾರ-ವಿಚಾರ - Rituals — kannada @ 5:32 pm

ಆಗಸ್ಟ್ ೨೭, ೨೦೦೬ ರಂದು ಗಣೇಶ ಚತುರ್ಥಿ.

ಅಗಜಾನನ ಪದ್ಮಾರ್ಕಂ ಗಜಾನನಂ ಅಹರ್ನಿಷಮ್

ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ!

ನಾನು ಬೆಂಗಳೂರಿನಲ್ಲಿದ್ದಾಗ ಗೌರೀ ಗಣಪತಿ ಹಬ್ಬಗಳು ಬಹಳ ದೊಡ್ಡದಾಗಿ ಆಚರಿಸಿದ್ದುದು ಒಂಟು. ಅಲ್ಲಿ ಗಣಪತಿ ಹಬ್ಬವನ್ನ ಮನೆಗಳಲ್ಲೇ ಅಷ್ಟೇ ಅಲ್ಲದೆ ಸುಮಾರು ಜನರು ಒಟ್ಟಾಗಿ ಸೇರಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗಣಪತಿ ವಿಗ್ರಹಗಳನ್ನ ಕುಳ್ಳರಿಸಿ ಪೂಜಿಸುತ್ತಿದ್ದರು. ಇಂದೂ ಸಹ ಅಲ್ಲಿ ಈ ಅಭ್ಯಾಸ ವಾಡಿಕೆಯಲ್ಲಿದೆ. ನಮಗೆ ಇಷ್ಟವಾಗುತ್ತಿದ್ದ ಅಂಶವೆಂದರೆ ಬೆಳಗಿನ ಜಾವದ ಲೌಡ್ ಸ್ಪೀಕರ್ ಮೂಲಕ ಬರುತ್ತಿದ್ದ ಹಾಡುಗಳು. ನಾನಿನ್ನೂ ನಿದ್ದೆಯಿಂದ ಏಳುವುದೋ ಬೇಡವೋ ಎಂದು ಸ್ನೂಜ಼್ ತೆಗೆದುಕೊಳ್ಳುವ ಹೊತ್ತು ಸುಮಾರು ೬ ಘಂಟೆ ಇರಬಹುದು – ಈ ಹಾಡುಗಳನ್ನ ಕೇಳಿದ ಕೂಡಲೆ ಎದ್ದು, ಆ ದಿನಕ್ಕೆ ಬೇಕಾಗುವ ಹೂವು ಪತ್ರೆಗಳು, ಗರಿಕೆ ಹುಲ್ಲು, ಮಾವಿನ ಸೊಪ್ಪು ಮುಂತಾದವುಗಳನ್ನ ಅಣಿ ಮಾಡಲು ಮುಂದಾಗುತ್ತಿದ್ದೆವು. ನಂತರ ನೈವೇದ್ಯಕ್ಕೆ ಬೇಕಾದ ತಿಂಡಿ ತಿನಿಸುಗಳನ್ನ ಮಾಡಿಕೊಂಡು ಪೂಜೆ ಮೊದಲ್ಗೊಂಡು ನೈವೇದ್ಯವಾಗಿ ಪ್ರಸಾದ (ಕಡುಬು, ಇತ್ಯಾದಿ) ತಿನ್ನುವುದಕ್ಕೆ ಕಾಯುತ್ತಿರುತ್ತಿದ್ದೆ.  🙂

ಉದ್ಭವ.ಕಾಮ್ ವೆಬ್ ಸೈಟ್‌ನಲ್ಲಿ ಸಾಕಷ್ಟು ಹಾಡುಗಳು ಮುಂತಾದ ರೆಕಾರ್ಡಿಂಗ್‌ಗಳು ಇವೆ. ಗಣಪತಿ ಪೂಜೆಯಾನು ಆಚರಿಸುವ ವಿಧಾನ, ಸಂಕಷ್ಟಹರ ಸ್ತುತಿ, ಇತ್ಯಾದಿ ಹಾಡು, ಶ್ಲೋಕಗಳನ್ನ ಕೂಡ ಅಲ್ಲಿ ಪಡೆಯಬಹುದು.

ಗಣೇಶ ಚತುರ್ಥಿ ಶುಭಾಷಯಗಳು

ಗಣಪತಿ ತಮಗೆಲ್ಲರಿಗೂ ಸಕಲ ವಿಘ್ನಗಳನ್ನೂ ನಿವಾರಿಸಿ ಸುಗಮ ಹಾದಿಯನ್ನ ಒದಗಿಸಿಕೊಡಲೆಂದು ಆಶಿಸುವ…

ಹಾ.. ಅಕ್ಸ್ಮಾತ್ತಾಗಿ ಚಂದಿರ ದರ್ಶನವನ್ನೇನಾದರೂ ಈ ದಿನದಂದು ಮಾಡಿದರೆ ಗನ್ಣಪತಿ ಕಥಾ ಶ್ರವಣದಲ್ಲಿ ಇರುವ ಸ್ಯಮಂತಪೋಕ್ಯಾನ ಮಂತ್ರವನ್ನ ಪಠಿಸುವುದನ್ನ ಮರೆಯದಿರಿ.

ಸಿಂಹಃ ಪ್ರಸೇನಮವಧೀತ್ ಸಿಂಹೊ ಜಾಂಬವತಾ ಹತಃ

ಸುಕುಮಾರಕ ! ಮಾ ರೊದಿಃ ತವ ಹ್ಯೇಶ ಶ್ಯಮಂತಕಃ !

ರಾಮ್

August 26, 2006

ಗಣೇಶ ಚತುರ್ಥಿ ಶುಭಾಷಯಗಳು

Filed under: ಆಚಾರ-ವಿಚಾರ - Rituals — kannada @ 5:59 pm

August 16, 2006

ಕನ್ನಡ ವರ್ಡ್‌ಪ್ರೆಸ್

Filed under: ಕನ್ನಡ - Kannada, Language - ಭಾಷೆ — kannada @ 8:15 am

ಕನ್ನಡ ವರ್ಡ್‌ಪ್ರೆಸ್

ನನಗೆ ತಿಳಿದ ಮಟ್ಟಿಗೆ ವರ್ಡ್‌ಪ್ರೆಸ್‌ನವರದ್ದು ಇಂಗ್ಲೀಷ್ ಬ್ಲಾಗ್ ಇತ್ತು, ಆದರೂ ಬೇರೆ ಭಾಷೆಗಳಲ್ಲಿ ಯೂನಿಕೋಡ್ / ಬೇರೆ ಭಾಷೆಗಳಲ್ಲಿ ಬ್ಲಾಗ್ ಪಬ್ಲಿಷ್ ಕೂಡ ಆಗುತ್ತಿದ್ದವು. ನನಗೆ ಉತ್ಸಾಹ ತಂದದ್ದೇನೆಂದರೆ ಬೇರೆ ಬೇರೆ ಭಾಷೆಗಳಿಗೆ ಅದರದ್ದೇ ಆದ ಯು ಆರ್ ಎಲ್ ಕೂಡ ಇವೆ. ಈ ಒಂದು ಅಂಶ ಸುಮಾರು ಮೊದಲಿಂದಲೇ ಇದ್ದರೂ ಇರಬಹುದು ಆದರೆ ನಾನು ಈಗ ತಾನೇ ಗಮನಿಸಿದೆ. ಅದರಲ್ಲೂ ಉತ್ಸಾವೆಂದರೆ ಕನ್ನಡ ಬ್ಲಾಗ್ ಅಲ್ಲಿ ಹಾಟ್ ಲಿಸ್ಟ್‌ನಲ್ಲಿ ಒಂದಾಗಿತ್ತು 🙂

August 6, 2006

ಉಪಾಕರ್ಮ

Filed under: ಆಚಾರ-ವಿಚಾರ - Rituals — kannada @ 7:31 am

ಉಪಾಕರ್ಮ

 

ಇತ್ತೀಚೆಗೆ ಹೀಗೆ ಅಂತರ್ಜಾಲದಲ್ಲಿ ಬ್ಲಾಗ್ ಪೋಸ್ಟ್ ಮಾಡುತ್ತಿರಬೇಕಾದರೆ ಈ ಒಂದು ಸೈಟ್‌ನಲ್ಲಿ ಉಪಾಕರ್ಮ ಕುರಿತಾದ ವಿಚಾರಗಳು ಲಿಂಕ್ ಮಾಡಿರುವುದು ಕಂಡುಬಂತು. ಅವುಗಳಲ್ಲಿ ಇದು ನನಗೇನೋ ಬಹಳ ಉಪಯೋಗಕಾರಿ ಎಂದೆನಿಸಿತು. ಹಾಗೂ ಈ ವಿಷಯ ಸಮಯೋಪಕಾರಿ ಕೂಡ ಏಕೆಂದರೆ ಮುಂದಿನ ವಾರ (ಆಗಸ್ಟ್ ೮, ಹಾಗೂ ೯ ರಂದು ಯಜುರ್ ಹಾಗೂ ಋಗ್‌ವೇದೀ ಉಪಾಕರ್ಮವೆಂದು ಕ್ಯಾಲೆಂಡರ್‌ನಿಂದ ಗೊತ್ತಾಯಿತು.

 

ಇಂತಹ ಒಂದು ವಿಚಾರವನ್ನ ಬ್ಲಾಗ್ ಮಾಡಿದ್ದಕ್ಕೆ ಧನ್ಯವಾದಗಳು ರಾಮ್ಸಬೋಡ್.

 

 

ಸೋಪ್ ಲೇಕ್ ಪ್ರವಾಸ (soap lake)

Filed under: ಪ್ರವಾಸ - Travel — kannada @ 7:15 am

ಸೋಪ್ ಲೇಕ್ ಪ್ರವಾಸ

 

ಹೀಗೆ ಕೆಲವು ವರ್ಷಗಳ ಹಿಂದೆ ನಮ್ಮ ಪಕ್ಕದ ಮನೆಯವರು ಸೋಪ್ ಲೇಕ್ ಇಲ್ಲೇ ಹತ್ತಿರದಲ್ಲೆ ಅಂದರೆ ಸುಮಾರು ೧೪೦ಮೈಲುಗಳ ದೂರದಲ್ಲಿ ಇರುವುದಾಗೆ ಹೇಳಿದ್ದರು. ಸರಿ, ಕೆಲವು ತಿಂಗಳುಗಳು ಕಳೆದ ನಂತರ, ನಾವು ಮತ್ತೊಬ್ಬ ಸ್ನೇಹಿತ, ಮತ್ತಿನ್ನೊಬ್ಬರು ದಂಪತಿ – ಒಟ್ಟಿಗೆ ಐದು ಜನ ಆ ಹಾದಿಗೆ ಹೊರಟೆವು. ಮನೆಯಿಂದಲೇ ತಿಂಡಿ ತಿನಿಸುಗಳನ್ನ ಕೂಡ ಪ್ಯಾಕ್ ಮಾಡಿ ಹೊರಟಿದ್ದೆವು. ಹೇಗೋ ಡ್ರೈವ್ ಮಾಡಿಕೊಂಡು ಕೊನೆಗೂ ಸೋಪ್ ಲೇಕ್ ಸೇರಿದೆವು. ಯಾರೋ ಹೇಳಿದ್ದಂತೆ ಆ ನೀರಿನಲ್ಲಿ ಮುಳುಗಿ ಸ್ನಾನ ಮಾಡಲು ಸುಮಾರು ದೂರದಿಂದೆಲ್ಲ ಬರುತ್ತಾರೆ. ಆ ನೀರು ಹಾಗೂ ಮಣ್ಣಿನಲ್ಲಿ ಯಾವುದೋ ಮಿನರಲ್ ಹಾಗೂ ಚರ್ಮಕ್ಕೆ ಬೇಕಾದ ಮಿನರಲ್‌ಗಳು ಸಿಗುವುದೆಂಬುದು ಅಲ್ಲಿನ ನಂಬಿಕೆ. ಸರಿ ನಾವೂ ಸಹ ಏನೋ ಎಕ್ಸ್‌ಪೆಕ್ಟೇಷನ್ ಇಟ್ಟುಕೊಂಡು ಅಲ್ಲಿಗೆ ತಲುಪಿದೆವು. ಆ ನೀರಿನ ಬಳಿ ಹೋಗಿದ್ದೇ, ಅಲ್ಲಿ ಸ್ನಾನ ಮಾಡುವ ಹುಮ್ಮಸ್ಸು, ಆಸೆ ಎಲ್ಲಾ ಹೊರಟುಹೋಯಿತು. ಅಲ್ಲೀವರೆಗು ಹೋಗೆದ್ದ ಕಾರಣಕ್ಕೆ ಆ ನೀರಿನಲ್ಲಿ ಎಲ್ಲರೂ ಇಳಿದು ಸ್ವಲ್ಪ ನಡೆದಾಡಿ, ಅಲ್ಲಿರುವ ಜನರು ಆ ಮಣ್ಣನ್ನು ತಮ್ಮ ದೇಹಕ್ಕೆಲ್ಲಾ ಮೆತ್ತಿಕೋಂಡು ಸನ್ ಬಾತ್ / ಟಾನ್ ಮಾಡಿಕೊಳ್ಳುತ್ತಿದ್ದನ್ನ ಕಂಡೆವು. ಅಲ್ಲೇ ನಾವು ತೆಗೆದುಕೊಂಡು ಹೋಗಿದ್ದ ಊಟವನ್ನ ಮಾಡಿ ಅಲ್ಲಿಂದ ಹೊರಟೆವು.

 

ಇಂದಿಗೂ ಸಹ ಎಲ್ಲಾದರೂ ದೂರ ವಲಯಕ್ಕೆ ಪ್ರಯಾಣ ಮಾಡಬೇಕೆಂದರೆ ನಮ್ಮ ಆ ದಿನದ ಪ್ರವಾಸ ಜ್ನ್ಯಾಪಕ ಬರುತ್ತದೆ … ಹಹ್ಹಹ್ಹಾ…

 

ಬೇರೆ ಕೆಲವೌ ಗುರುತುಗಳು ಹಾಗೂ ವಿಷಯಗಳನ್ನ ಅಂತರ್ಜಾಲದಲ್ಲಿ ಪಡೆಯಬಹುದು.

a.http://www.soaplakecoc.org/soaplakepictures.html

b.

 

 

ರಾಮ್

 

Create a free website or blog at WordPress.com.