ಸೌತೇಕಾಯಿ ಸೂಪ್
ಇಂದು ಸಂಜೆ ನಮ್ಮ ಊಟದ ನಂತರ ನಾವು ಬೆರೆ ಏನಾದರು ಹೊಸ ತಿಂಡಿ ಟ್ರೈ ಮಾಡಬೇಕೆಂದು ಕೊಂಡು ಇದೊಂದನ್ನ ಪ್ರಯತ್ನಿಸಿದೆವು – ಸೌತೇಕಾಯಿ ಸೂಪ್
ಸಾಮಗ್ರಿಗಳು:
- ಸೌತೇಕಾಯಿ – 1
- ಮೊಸರು – 1 ಕಪ್
- ಸಣ್ಣ (ಸಾಂಬಾರ್) ಈರುಳ್ಳಿ – 2
- ಉಪ್ಪು – ರುಚಿಗೆ ತಕ್ಕಷ್ಟು
- ಮೆಣಸು ಪುಡಿ – 1/2 tsp
ಸೌತೇಕಾಯಿ ಸೂಪ್
ಇಂದು ಸಂಜೆ ನಮ್ಮ ಊಟದ ನಂತರ ನಾವು ಬೆರೆ ಏನಾದರು ಹೊಸ ತಿಂಡಿ ಟ್ರೈ ಮಾಡಬೇಕೆಂದು ಕೊಂಡು ಇದೊಂದನ್ನ ಪ್ರಯತ್ನಿಸಿದೆವು – ಸೌತೇಕಾಯಿ ಸೂಪ್
ಸಾಮಗ್ರಿಗಳು:
ಪತ್ರ ಬರೆಯುವ ಅಭ್ಯಾಸ
ಹಲವಾರು ವರ್ಷಗಳ ಹಿಂದೆ ನಾನು ನನ್ನ ಪೇರೆಂಟ್ಸ್‌ಗೆ ಪತ್ರ ಬರೆಯುತ್ತಿದ್ದು ವಾಡಿಕೆಯಲ್ಲಿತ್ತು. ಪತ್ರ ಬರೆಯುವುದೆಂದರೆ, ಲೇಖನಿ ಕಾಗದ – ಇದೇ ನನ್ನ ಮಾಧ್ಯಮವಾಗಿತ್ತು. ಆ ಸಮಯದಲ್ಲಿ ಕೀ ಬೋರ್ಡು ಮಾಪಿಂಗ್ ಒಂದಿತ್ತೆನಿಸುತ್ತೆ. ಎಷ್ಟೋ ಸರ್ತಿ ನನ್ನ ಸಹೋದರನನ್ನು ಪದೇ ಪದೇ ಅಂತಹದೊಂದನ್ನ ಪತ್ತೆ ಹಚ್ಚುವುದಕ್ಕೆ ಗೋಳಾಡಿಕೊಂಡದ್ದೂ ಇದೆ. ಹೀಗೇ ಒಂದು ದಿನ ಬರಹ ಟ್ರಾನ್ಸ್‌ಲಿಟರೇಷನ್ ಸಾಫ಼್ಟ್‌ವೇರ್ ಬಗ್ಗೆ ಕೇಳಿದೆ. ಆ ದಿನಗಳಲ್ಲಿ ಸಾಕಷ್ಟು ಕಾಲ ಟೈಪ್ ಮಾಡಿದ್ದೂ ಮಾಡಿದ್ದೆ. ಹಾಗೆ ಪ್ರಾರಂಭವಾದ ನನ್ನ ಪತ್ರ ಬರೆಯುವ ವಿದಾನ ಈಗಲೂ ಕೂಡ ವರ್ಷಕ್ಕೆ ಒಂದು-ಎರಡು ಸಾರಿ ಹಾಗಿದೆ. ಅಮ್… ಈಗಂತೂ ಕನ್ನಡದಲ್ಲಿ ಪತ್ರ ಬರೆಯುವುದೆಂದರೆ ಸಾಕಷ್ಟು ಕಾಲ ಕೊಡಬೇಕು. ಒಂದು ಪತ್ರವನ್ನ ಸುಮಾರು ೨-೩ ವಾರಗಳಲ್ಲಿ ಬರೆಯುತ್ತೇನೆ. ಒಹ್! ವೈಟ್ ಪೇಪರ್ ಅಥವ ಕಥೆ ಕಾದಂಬರಿ ಅಲ್ಲ, ಬರೀ ಒಂದು ಪುಟ ಕನ್ನಡ ಪತ್ರ. ನಾನು ಪ್ರಾರಂಭ ಮಾಡಿ ಪತ್ರ ಮುಗಿಸೋ ಹೊತ್ತಿಗೆ ಸುಮಾರು ವಿಷಯಗಳು ಹಳೆಯದಾಗಿ ಹೋಗಿರತ್ತೆ. ಹಹ್ಹಹ್ಹಾ…
ಶುಭಾಷಿತಗಳು
ನಾನು ಎಂಟನೆ ತರಗತಿಯಲ್ಲಿದ್ದಾಗ ಸಂಸ್ಕೃತ ಮೂರನೆ ಭಾಷೆ (third language )ಆಗಿತ್ತು. ಸರಿ ಆಗ ತಾನೆ ಒಂದು ಹೊಸ ಭಾಷೆಯನ್ನ ಕಲಿಯುತ್ತಿದ್ದೆಯಾದ್ದರಿಂದ ಸಾಕಷ್ಟು ಉತ್ಸಾಹ ಇರುತ್ತಿತ್ತು. ಅದರಲ್ಲೂ ಆ ಹೊತ್ತಿಗೆ ಹಿಂದಿ ಸ್ವಲ್ಪ ಗೊತ್ತಿದ್ದರಿಂದ ಸಂಸ್ಕೃತ ಕಲಿಯುವುದು ಒಂದು ತರಹ ಮಜವೆ ಆಗಿತ್ತು. ನನ್ನ ಮೆಚ್ಚಿನ ಸೆಕ್ಷನ್ ಅಂದರೆ ಪದ್ಯಗಳು ಅದರಲ್ಲೂ ಶುಭಾಷಿತಗಳು. ಸುಮಾರು ಶುಭಾಷಿತಗಳು ಸಾಕಷ್ಟು ವರ್ಷಗಳ ಕಾಲ ಜ್ನ್ಯಾಪಕವಿರುತ್ತಿತ್ತು. ಅದು ಸರಿ, ಇತ್ತೀಚೆಗೆ ಸುಮಾರು ಮರೆತು ಹೋಗಿ, ಪೂರ್ತಿಯಾಗಿ ಸಿಗಬಹುದಾದಂತ ರಿಸೋರ್ಸ್‌ಗಳನ್ನ ಹುಡುಕುತ್ತಿದ್ದೇನೆ. ಹೀಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಈ ಒಂದು ವೆಬ್ ಸೈಟ್ ಬೆಳಕಿಗೆ ಬಂತು. ಬೆಂಗಳೂರಿನ ಪ್ರಶಾಂತ್ ಕೋಟರವರು ಬಹಳಷ್ಟು ಶುಭಾಷಿತಗಳನ್ನ ಸಂಗ್ರಹಿಸಿದ್ದಾರೆ. ದಿನಕ್ಕೊಂದು ಶುಭಾಷಿತವನ್ನ ಪಬ್ಲಿಷ್ ಮಾಡುವುದನ್ನ ವಾಡಿಕೆಯಲ್ಲಿಟ್ಟಿದ್ದಾರೆ. ಸೊಗಸೆಂದರೆ ಶುಭಾಷಿತದೊಂದಿಗೆ ಅವುಗಳ ಅರ್ಥಗಳನ್ನ ಕೂಡ ಅಲ್ಲಿ ಕಾಣಬಹುದು. ನಿಮಗೆ ಶುಭಾಷಿತಗಳ ಆಸಾಕ್ತಿಇದ್ದರೆ ಇಲ್ಲಿ ಹೋಗಿ ನೋಡಿ.
url: http://www.geocities.com/prashanth_k_blr/Subhashitani/index.html