ಉಗಾದಿ ಶುಭಾಷಯಗಳು (ವ್ಯಯ ನಾಮ ಸಂವತ್ಸರ)
ಯುಗ ಯುಗಾದಿ ಕಳೆದರೂ ಉಗಾದಿ ಮರಳಿ ಬರುತಿದೆ; ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ – ಹೊಸತು ಹೊಸತು ತರುತಿದೆ
ಉಗಾದಿ ಶುಭಾಷಯಗಳು (ವ್ಯಯ ನಾಮ ಸಂವತ್ಸರ)
ಯುಗ ಯುಗಾದಿ ಕಳೆದರೂ ಉಗಾದಿ ಮರಳಿ ಬರುತಿದೆ; ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ – ಹೊಸತು ಹೊಸತು ತರುತಿದೆ
ಏರೋಪ್ಲೇನ್ ಬಾಣಲೆ
[ನಗೆ ಹನಿ]
ನಾವು ಈಗೊಂದು ೮ ತಿಂಗಳ ಮುಂಚೆ ಬೆಂಗಳೂರಿಗೆ ಹೋಗಿದ್ದೆವು. ನನ್ನಾಕೆ ಇಲ್ಲಿ ಮನೆಗೆ ಬೇಕಾದ ವಸ್ತುಗಳನ್ನ ಖರೀದುಸಿತ್ತಿದ್ದಳು. ಹೀಗೆ ನಮಗೆ ಗೊತ್ತಿರುವವರ ಮನೆಗೊಮ್ಮೆ ಹೋಗಿದ್ದೆವು. ಅಲ್ಲಿ ಒಂದು ಬಾಣಲೆ ಕಣ್ಣಿಗೆ ಬಿತ್ತು. ಬಹಳ ಎಫ಼ಿಶಿಯಂಟ್‌ಆದ ಬಾಣಲೆ ಎಂದರು ಆ ಮನೆಯವರು. ಸರಿ, ಅದರ ಮೇಲೆ ನನ್ನಾಕೆಯ ಕಣ್ಣು ಬಿತ್ತು. ಅದು ಎಂಥ ಬಾಣಲೆ? ಅದರ ಹೆಸರೇನು? ಎಲ್ಲಿ ಸಿಗುತ್ತದೆ? ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಸುರಿಮಳೆಯೇ ಆಯಿತು. ಸರಿ, ವಿಷಯ ಸಂಗ್ರಸಿದ್ದು ಆಯಿತು. ತಾನು ಆ ಏರಿಯದಲ್ಲಿರುವ ಅಂಗಡಿಗಳಿಗೆಲ್ಲಾ ಒಂದು ವಿಸಿಟ್ ಮಾಡುವ ಪ್ಲಾನಿತ್ತಂತೆ. ನನ್ನ ಜೊತೆ ಮೋಟಾರ್ ಸೈಕಲ್ಲಿನಲ್ಲಿ ಓಡಾಡಿದ್ದರಿಂದ ಅಲ್ಲೆಲ್ಲಾ ಹೋಗುವ ಪುರ್ಸೊತ್ತು ಇರಲಿಲ್ಲ. ಎನಿವೇಸ್, ನಾವು ಅಲ್ಲಿಂದ ಅಮೇರಿಕಕ್ಕೆ ಹೊರಡುವ ದಿನ ನನ್ನ ತಮ್ಮ ಹಾಗು ನನ್ನಾಕೆ ಇಬ್ಬರೊ ನಮ್ಮ ೫ ತಿಂಗಳ ಕೂಸಿಗೆ ಬಟ್ಟೆ ತರುವುದಕ್ಕಾಗಿ ಹೋಗಿದ್ದರು – ಹಾಗೇ ಮನೆಗೆ ಬಂದಿತ್ತು ಒಂದು ಏರೋಪ್ಲೇನ್ ಬಾಣಲಿ … ಹಹ್ಹಹ್ಹಾ…
ಸರಿ, ಅದನ್ನ ಇಲ್ಲಿಗೆ ತಂದಿದ್ದು ಆಯಿತು. ತಾನು ಹೇಗೆ ಉಪಯೋಗಿಸುತ್ತಾಳೋ ಗೊತ್ತಿಲ್ಲ, ನಾನು ಅದನ್ನ ಅಕಸ್ಮಾತ್ತಾಗಿ ಉಪಯೋಗಿಸಿದಾಗಲೆಲ್ಲಾ ಅಥವ ಅಡುಗೆ ಮನೆಯಲ್ಲಿ ಆ ಬಾಣಲಿಯಲ್ಲಿಟ್ತುರುವ ತಿಂಡಿ ಕದಿಯಲು ಹೋದಾಗಲೆಲ್ಲಾ ಕೈ ಸುಟ್ಟಿಕೊಳ್ಲುತ್ತೇನೆ. ಅದರ ಎರಡು ಕಿವಿ(ಹಿಡಿ)ಗಳಿಗೆ ಇನ್ಸುಲೇಷನ್ ಇಲ್ಲ ಇಡೀ ಬಾಣಲಿ ಬಿಸಿಯಾಗಿ ಹೋಗಿರತ್ತೆ. ಬಹುಶಃ ಅದರ ಪರ್ಪಸ್ಸೇ ಅದಾಗಿರಬೇಕು. ಈಗ ಸದ್ಯಕ್ಕೆ ನನ್ನ ಕೈ ಸ್ವಲ್ಪ ಸುಟ್ತಿದೆ ಹಾಗಾಗಿ ಅದರ ಬಗ್ಗೆ ಜ್ನ್ಯಾಪಕ ಬಂತು. ಸುಟ್ಟಾಗ ಅದರ ಮೇಲೆ ಕೋಪ ಮಾಡಿಕೊಂಡು ನಂತರ ಅದನ್ನ ತಂದ ಬಗೆಯನ್ನು ಜ್ನ್ಯಾಪಿಸಿಕೊಂಡು ನಕ್ಕಿದ್ದೂ ಉಂಟು.
ಹಹ್ಹಹ್ಹಾ…
ಬರಹ
ಈಗ್ಗೆ ಸುಮಾರು ವರ್ಷದಿಂದ ಒಂದು ಕನ್ನಡ ಬ್ಲಾಗ್ ಬರೀಬೆಕೆಂಬ ಆಸೆಯಿಂದಿದ್ದೆ ಆದರೆ ಆಗಿರಲಿಲ್ಲ. ನನ್ನ ವೀಕ್-ನೆಸ್ ಇದ್ದದ್ದು ಕನ್ನಡದಲ್ಲಿ ಟೈಪ್ ಮಾಡುವುದು. ಈಗ ಕೂಡ ನನಗೆ ಕನ್ನಡದಲ್ಲಿ ಟೈಪ್ ಮಾಡುವುದಕ್ಕೆ ಬರುವುದಿಲ್ಲ ಆದರೆ ಬರಹ ಸಾಫ಼್ಟ್‌ವೇರ್ ಬಳಸಿ ಕನ್ನಡಕ್ಕೆ ಟ್ರಾನ್ಸಿಲಿಟರೇಟ್ ಮಾಡುವುದನ್ನ ಸುಮಾರು ವರ್ಷಗಳ ಹಿಂದೆ ಪ್ರಾರಂಬಿಸಿದ್ದೆ. ನಿಮಗೂ ಕನ್ನಡದಲ್ಲಿ ಟೈಪ್ ಮಾಡುವ ಯೋಚನೆ ಇದ್ದಲ್ಲಿ ಸುಲಭವಾಗಿ ಕಾರ್ಯೋನ್ಮಿತಗೊಳಿಸುವುದಕ್ಕೆ ಬರಹ ಬಳಸಿ ಪ್ರಯತ್ನಿಸಿ ನೋಡಿ. ಇಂಟರ್‌ನೆಟ್ ಸೈಟಿನಿಂದ ಇದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದು.
ನಮಸ್ತೆ
ಪ್ರಜಾವಾಣಿ
ನಾನು ಬೆಂಗಳೂರಿನಲ್ಲಿದ್ದಾಗ ನಮ್ಮ ದಿನಚರಿ ಪ್ರಾರಂಭವಾಗುತ್ತಿದ್ದದ್ದು ಒಂದು ಲೋಟ ಕಾಫಿ ಮತ್ತು ದಿನ ಪತ್ರಿಕೆಯಿಂದ. ಅದರಲ್ಲೂ ಭಾನುವಾರಗಳಂದು ನಾನು ಬೆಳಿಗ್ಗೆ ಏಳು ಘಂಟೆಗೆ ಎದ್ದು ಮುಖ ತೊಳೆದು ನನ್ನ ಅಮ್ಮ ಕಾಫಿ ತ್ಂದುಕೊಡುವುದನ್ನೇ ಕಾಯುತ್ತಿರುತ್ತಿದ್ದೆ. ದಿನಸಂಚಿಕೆ ಆಗಾಗಲೇ ಬಂದಿರುತ್ತಿತ್ತು. ಕೂಡಲೇ ಒಂದು ಲೋಟ ಕಾಫಿ ಹಾಗೂ ದಿನಪತ್ರಿಕೆಯನ್ನು ಹಿಡಿದು ಸುಮಾರು ಒಂದರಿಂದ ಎರಡು ಗಂಟೆಗಳ ಕಾಲ ಕುಳಿತಿರುತ್ತಿದ್ದೆ.
ಸರಿ – ಈಗ ಎಷ್ಟೆಲ್ಲಾ ವಿಚಾರ ಬಂದಿದ್ದು ನಾನು ಪ್ರಜಾವಾಣಿಯ ಬಗ್ಗೆ ಬರೆಯಲು ಹೋದದ್ದಕ್ಕೆ. ಪ್ರಜಾವಾಣಿ ಕರ್ಣಾಟಕದ ಬಹು ಹೆಸರಾಂತ ದಿನಪತ್ರಿಕೆ. ಅದರಲ್ಲೂ ಬೆಂಗಳೂರಿನಲ್ಲಿ ಬಹಳ ಹೆಸರುವಾಸಿ. ಯಾವುದೇ ಕನ್ನಡಿಗನಾದರೂ ಪ್ರಜಾವಾಣಿಯ ಹೆಸರನ್ನ ಕೇಳದಿರಕ್ಕಿಲ್ಲ.
ಈಗಲೂ ಇಂಟರ್ನೆಟ್ ಆನ್-ಲೈನ್ ಮೂಲಕ ಈ ಪತ್ರಿಕೆಯನ್ನ ನನ್ನ ಹಾಗೆ ಬಹಳಷ್ಟು ಕನ್ನಡಿಗರು ಅದರಲ್ಲೂ ಬೆಂಗಳೂರಿನಿಂದ ದೂರವಿರುವವರು ಸಾಮಾನ್ಯವಾಗೆ ಓದುತ್ತಾರೆಂದು ಕೇಳಿದೆ.
ನಮಸ್ತೆ
ಕನ್ನಡ ಅನುವಾದ
ಸರಿ, ಇದು ತಮಾಶೆ ಅನಿಸಬಹುದು. ಕೆಲವು ತಿಂಗಳುಗಳ ಹಿಂದೆ ಒಂದು ಇಂಗ್ಲೀಷ್ ಭಾಷೆಯ ಲೇಖನವನ್ನ ಕನ್ನಡಕ್ಕೆ ಅನುವಾದ ಮಾಡಬೇಕೆಂದು ಶುರು ಮಾಡಿದ್ದೆ. ಒಂದೆರಡು ಪುಟಗಳು ಮಾಡಿರಬಹುದು – ಅಷ್ಟರಲ್ಲಿ ಏನು ಆಯಿತೋ ತಿಳಿಯದು ಆ ಕೆಲಸ ಹಾಗೇ ಉಳಿಯಿತು. ಬಹುಶಃ ಈ ವರ್ಷವಾದರೂ ಅದನ್ನ ಪೂರ್ತಿಗೊಳಿಸುವ ಆಸೆ ಇದೆ. ಹೇಗಾಗುತ್ತೋ ನೋಡಬೇಕು.
ನಮಸ್ತೆ
{technorati tag: ಅನುವಾದ }
ನಮಸ್ಕಾರ
ಇದು ನನ್ನ ಮೊದಲನೆ ಕನ್ನಡದ blogಮತ್ತೆ ಇದರಲ್ಲಿ ಹೆಚ್ಚಿಗೆ ಬರೆಯುವುದಕ್ಕೆ ಪ್ರಯತ್ನಿಸುತ್ತೇನೆ.
ರಾಮ್
{technorati tag: kannada}
Welcome to WordPress.com. This is your first post. Edit or delete it and start blogging!