August 26, 2006
August 16, 2006
ಕನ್ನಡ ವರ್ಡ್‌ಪ್ರೆಸ್
ನನಗೆ ತಿಳಿದ ಮಟ್ಟಿಗೆ ವರ್ಡ್‌ಪ್ರೆಸ್‌ನವರದ್ದು ಇಂಗ್ಲೀಷ್ ಬ್ಲಾಗ್ ಇತ್ತು, ಆದರೂ ಬೇರೆ ಭಾಷೆಗಳಲ್ಲಿ ಯೂನಿಕೋಡ್ / ಬೇರೆ ಭಾಷೆಗಳಲ್ಲಿ ಬ್ಲಾಗ್ ಪಬ್ಲಿಷ್ ಕೂಡ ಆಗುತ್ತಿದ್ದವು. ನನಗೆ ಉತ್ಸಾಹ ತಂದದ್ದೇನೆಂದರೆ ಬೇರೆ ಬೇರೆ ಭಾಷೆಗಳಿಗೆ ಅದರದ್ದೇ ಆದ ಯು ಆರ್ ಎಲ್ ಕೂಡ ಇವೆ. ಈ ಒಂದು ಅಂಶ ಸುಮಾರು ಮೊದಲಿಂದಲೇ ಇದ್ದರೂ ಇರಬಹುದು ಆದರೆ ನಾನು ಈಗ ತಾನೇ ಗಮನಿಸಿದೆ. ಅದರಲ್ಲೂ ಉತ್ಸಾವೆಂದರೆ ಕನ್ನಡ ಬ್ಲಾಗ್ ಅಲ್ಲಿ ಹಾಟ್ ಲಿಸ್ಟ್‌ನಲ್ಲಿ ಒಂದಾಗಿತ್ತು
August 6, 2006
ಉಪಾಕರ್ಮ
ಉಪಾಕರ್ಮ
ಇತ್ತೀಚೆಗೆ ಹೀಗೆ ಅಂತರ್ಜಾಲದಲ್ಲಿ ಬ್ಲಾಗ್ ಪೋಸ್ಟ್ ಮಾಡುತ್ತಿರಬೇಕಾದರೆ ಈ ಒಂದು ಸೈಟ್‌ನಲ್ಲಿ ಉಪಾಕರ್ಮ ಕುರಿತಾದ ವಿಚಾರಗಳು ಲಿಂಕ್ ಮಾಡಿರುವುದು ಕಂಡುಬಂತು. ಅವುಗಳಲ್ಲಿ ಇದು ನನಗೇನೋ ಬಹಳ ಉಪಯೋಗಕಾರಿ ಎಂದೆನಿಸಿತು. ಹಾಗೂ ಈ ವಿಷಯ ಸಮಯೋಪಕಾರಿ ಕೂಡ ಏಕೆಂದರೆ ಮುಂದಿನ ವಾರ (ಆಗಸ್ಟ್ ೮, ಹಾಗೂ ೯ ರಂದು ಯಜುರ್ ಹಾಗೂ ಋಗ್‌ವೇದೀ ಉಪಾಕರ್ಮವೆಂದು ಕ್ಯಾಲೆಂಡರ್‌ನಿಂದ ಗೊತ್ತಾಯಿತು.
ಇಂತಹ ಒಂದು ವಿಚಾರವನ್ನ ಬ್ಲಾಗ್ ಮಾಡಿದ್ದಕ್ಕೆ ಧನ್ಯವಾದಗಳು ರಾಮ್ಸಬೋಡ್.
ಸೋಪ್ ಲೇಕ್ ಪ್ರವಾಸ (soap lake)
ಸೋಪ್ ಲೇಕ್ ಪ್ರವಾಸ
ಇಂದಿಗೂ ಸಹ ಎಲ್ಲಾದರೂ ದೂರ ವಲಯಕ್ಕೆ ಪ್ರಯಾಣ ಮಾಡಬೇಕೆಂದರೆ ನಮ್ಮ ಆ ದಿನದ ಪ್ರವಾಸ ಜ್ನ್ಯಾಪಕ ಬರುತ್ತದೆ … ಹಹ್ಹಹ್ಹಾ…
ಬೇರೆ ಕೆಲವೌ ಗುರುತುಗಳು ಹಾಗೂ ವಿಷಯಗಳನ್ನ ಅಂತರ್ಜಾಲದಲ್ಲಿ ಪಡೆಯಬಹುದು.
a.http://www.soaplakecoc.org/soaplakepictures.html
b.
ರಾಮ್
May 22, 2006
ಸೌತೇಕಾಯಿ ಸೂಪ್
ಸೌತೇಕಾಯಿ ಸೂಪ್
ಇಂದು ಸಂಜೆ ನಮ್ಮ ಊಟದ ನಂತರ ನಾವು ಬೆರೆ ಏನಾದರು ಹೊಸ ತಿಂಡಿ ಟ್ರೈ ಮಾಡಬೇಕೆಂದು ಕೊಂಡು ಇದೊಂದನ್ನ ಪ್ರಯತ್ನಿಸಿದೆವು – ಸೌತೇಕಾಯಿ ಸೂಪ್
ಸಾಮಗ್ರಿಗಳು:
- ಸೌತೇಕಾಯಿ – 1
- ಮೊಸರು – 1 ಕಪ್
- ಸಣ್ಣ (ಸಾಂಬಾರ್) ಈರುಳ್ಳಿ – 2
- ಉಪ್ಪು – ರುಚಿಗೆ ತಕ್ಕಷ್ಟು
- ಮೆಣಸು ಪುಡಿ – 1/2 tsp
May 19, 2006
ಪತ್ರ ಬರೆಯುವ ಅಭ್ಯಾಸ
ಪತ್ರ ಬರೆಯುವ ಅಭ್ಯಾಸ
ಹಲವಾರು ವರ್ಷಗಳ ಹಿಂದೆ ನಾನು ನನ್ನ ಪೇರೆಂಟ್ಸ್‌ಗೆ ಪತ್ರ ಬರೆಯುತ್ತಿದ್ದು ವಾಡಿಕೆಯಲ್ಲಿತ್ತು. ಪತ್ರ ಬರೆಯುವುದೆಂದರೆ, ಲೇಖನಿ ಕಾಗದ – ಇದೇ ನನ್ನ ಮಾಧ್ಯಮವಾಗಿತ್ತು. ಆ ಸಮಯದಲ್ಲಿ ಕೀ ಬೋರ್ಡು ಮಾಪಿಂಗ್ ಒಂದಿತ್ತೆನಿಸುತ್ತೆ. ಎಷ್ಟೋ ಸರ್ತಿ ನನ್ನ ಸಹೋದರನನ್ನು ಪದೇ ಪದೇ ಅಂತಹದೊಂದನ್ನ ಪತ್ತೆ ಹಚ್ಚುವುದಕ್ಕೆ ಗೋಳಾಡಿಕೊಂಡದ್ದೂ ಇದೆ. ಹೀಗೇ ಒಂದು ದಿನ ಬರಹ ಟ್ರಾನ್ಸ್‌ಲಿಟರೇಷನ್ ಸಾಫ಼್ಟ್‌ವೇರ್ ಬಗ್ಗೆ ಕೇಳಿದೆ. ಆ ದಿನಗಳಲ್ಲಿ ಸಾಕಷ್ಟು ಕಾಲ ಟೈಪ್ ಮಾಡಿದ್ದೂ ಮಾಡಿದ್ದೆ. ಹಾಗೆ ಪ್ರಾರಂಭವಾದ ನನ್ನ ಪತ್ರ ಬರೆಯುವ ವಿದಾನ ಈಗಲೂ ಕೂಡ ವರ್ಷಕ್ಕೆ ಒಂದು-ಎರಡು ಸಾರಿ ಹಾಗಿದೆ. ಅಮ್… ಈಗಂತೂ ಕನ್ನಡದಲ್ಲಿ ಪತ್ರ ಬರೆಯುವುದೆಂದರೆ ಸಾಕಷ್ಟು ಕಾಲ ಕೊಡಬೇಕು. ಒಂದು ಪತ್ರವನ್ನ ಸುಮಾರು ೨-೩ ವಾರಗಳಲ್ಲಿ ಬರೆಯುತ್ತೇನೆ. ಒಹ್! ವೈಟ್ ಪೇಪರ್ ಅಥವ ಕಥೆ ಕಾದಂಬರಿ ಅಲ್ಲ, ಬರೀ ಒಂದು ಪುಟ ಕನ್ನಡ ಪತ್ರ. ನಾನು ಪ್ರಾರಂಭ ಮಾಡಿ ಪತ್ರ ಮುಗಿಸೋ ಹೊತ್ತಿಗೆ ಸುಮಾರು ವಿಷಯಗಳು ಹಳೆಯದಾಗಿ ಹೋಗಿರತ್ತೆ. ಹಹ್ಹಹ್ಹಾ…
May 2, 2006
ಶುಭಾಷಿತಗಳು (shubhaaShita)
ಶುಭಾಷಿತಗಳು
ನಾನು ಎಂಟನೆ ತರಗತಿಯಲ್ಲಿದ್ದಾಗ ಸಂಸ್ಕೃತ ಮೂರನೆ ಭಾಷೆ (third language )ಆಗಿತ್ತು. ಸರಿ ಆಗ ತಾನೆ ಒಂದು ಹೊಸ ಭಾಷೆಯನ್ನ ಕಲಿಯುತ್ತಿದ್ದೆಯಾದ್ದರಿಂದ ಸಾಕಷ್ಟು ಉತ್ಸಾಹ ಇರುತ್ತಿತ್ತು. ಅದರಲ್ಲೂ ಆ ಹೊತ್ತಿಗೆ ಹಿಂದಿ ಸ್ವಲ್ಪ ಗೊತ್ತಿದ್ದರಿಂದ ಸಂಸ್ಕೃತ ಕಲಿಯುವುದು ಒಂದು ತರಹ ಮಜವೆ ಆಗಿತ್ತು. ನನ್ನ ಮೆಚ್ಚಿನ ಸೆಕ್ಷನ್ ಅಂದರೆ ಪದ್ಯಗಳು ಅದರಲ್ಲೂ ಶುಭಾಷಿತಗಳು. ಸುಮಾರು ಶುಭಾಷಿತಗಳು ಸಾಕಷ್ಟು ವರ್ಷಗಳ ಕಾಲ ಜ್ನ್ಯಾಪಕವಿರುತ್ತಿತ್ತು. ಅದು ಸರಿ, ಇತ್ತೀಚೆಗೆ ಸುಮಾರು ಮರೆತು ಹೋಗಿ, ಪೂರ್ತಿಯಾಗಿ ಸಿಗಬಹುದಾದಂತ ರಿಸೋರ್ಸ್‌ಗಳನ್ನ ಹುಡುಕುತ್ತಿದ್ದೇನೆ. ಹೀಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಈ ಒಂದು ವೆಬ್ ಸೈಟ್ ಬೆಳಕಿಗೆ ಬಂತು. ಬೆಂಗಳೂರಿನ ಪ್ರಶಾಂತ್ ಕೋಟರವರು ಬಹಳಷ್ಟು ಶುಭಾಷಿತಗಳನ್ನ ಸಂಗ್ರಹಿಸಿದ್ದಾರೆ. ದಿನಕ್ಕೊಂದು ಶುಭಾಷಿತವನ್ನ ಪಬ್ಲಿಷ್ ಮಾಡುವುದನ್ನ ವಾಡಿಕೆಯಲ್ಲಿಟ್ಟಿದ್ದಾರೆ. ಸೊಗಸೆಂದರೆ ಶುಭಾಷಿತದೊಂದಿಗೆ ಅವುಗಳ ಅರ್ಥಗಳನ್ನ ಕೂಡ ಅಲ್ಲಿ ಕಾಣಬಹುದು. ನಿಮಗೆ ಶುಭಾಷಿತಗಳ ಆಸಾಕ್ತಿಇದ್ದರೆ ಇಲ್ಲಿ ಹೋಗಿ ನೋಡಿ.
url: http://www.geocities.com/prashanth_k_blr/Subhashitani/index.html
April 26, 2006
ಹಬ್ಬ ಹರಿದಿನಗಳು
ಹಬ್ಬ ಹರಿದಿನಗಳು
ಸುಮಾರು ಜನರಿಗೆ ಹಬ್ಬ ಹರಿದಿನಗಳ ಹಿನ್ನಲೆ ಆಗಲೀ ಅಥವ ಹಬ್ಬಗಳನ್ನ ಯಾಕೆ ಆಚರಿಸಬೇಕು ಎಂಬುವ ವಿಚಾರ ಗೊತ್ತಿರಲಿಕ್ಕಿಲ್ಲ. ಅದು ಸರಿ, ನಾನು ಶಾಲಾ ದಿನಗಳಲ್ಲಿ ಹಬ್ಬವೆಂದರೆ ಸಕಲ ತಿನಿಸುಗಳನ್ನ ಸವಿಯುವುದು ಒಂದು ಪರ್ಪಸ್ ಆಗಿರುತ್ತಿತ್ತು. ಅಂದಿನ ದಿನ ಬೆಳಗಿನ ಜಾವದಿಂದ ಹಿಡಿದು ಮಧ್ಯಾಹ್ನದವರೆಗೂ ನನ್ನ ಅಪ್ಪ ಅಮ್ಮ ಸಾಕಷ್ಟು ತಿಂಡಿಗಳನ್ನ ಮಾಡಿರುತ್ತಿದ್ದರು. ನಾನು ನನ್ನ ತಮ್ಮ ಊಟದ ಸಮಯಕ್ಕೆ ಕಾಯೂತ್ತಿದ್ದೆವು. ಪೂಜಾದಿಗಳು ಮುಗಿದು ನೈವೇದ್ಯಕ್ಕೆ ರೆಡಿಯಾದ ಕೂಡಲೆ ಅಲ್ಲಿಟ್ಟಿದ್ದ ತಿಂಡಿಗಳನ್ನ ತಿನ್ನುವುದೇ ಒಂದು ಮೋಜಾಗಿತ್ತು.
ಏನೇ ಆಗಲೀ ಕೆಲವು ಹಿನ್ನಲೆಗಳನ್ನ ಈಗಲಾದರು ತಿಳಿಯುವುದು ಒಳ್ಳೆಯದು ಅನಿಸುತ್ತೆ. ಇತ್ತೀಚೆಗೆ ಒಂದು ವೆಬ್ ಸೈಟ್ ನೋಡಿದೆ. ಅಲ್ಲಿ ಪೂರ್ತಿಯಲ್ಲದಿದ್ದರೂ ಇಂತಹ ಕೆಲವು ವಿಷಯಗಳನ್ನ ಪಬ್ಲಿಷ್ ಮಾಡಿದ್ದಾರೆ. ಹೋಗಿ ನೋಡಿ
{technorati tag: Indian Festivals}
April 18, 2006
ಚುರುಮುರಿ
ಸ್ವಲ್ಪ ಸಿಹಿ ಸ್ವಲ್ಪ ಸ್ಪೈಸಿ
ಹೌದು – ಸಿಹಿ ಮತ್ತೆ ಸ್ಪೈಸಿ ಸೇರಿಸಿ ಚುರುಮುರಿ ಆಗತ್ತೆ. ನಾನು ಇತ್ತೀಚೆಗೆ ಚುರುಮುರಿ ಎಂಬುವ ಒಂದು ಬ್ಲಾಗ್ ಸೈಟ್ ಗಮನಿಸಿದೆ. ಅದರಲ್ಲಿ ಸಾಕಷ್ಟು ಬೆಂಗಳೂರು ಮೈಸೂರು ವಿಚಾರಗಳನ್ನ ಕೊಟ್ಟಿದ್ದಾರೆ. ಇನ್ನೊಂದು ಹೆಮ್ಮೆಯ ವಿಷಯ ಅಂದರೆ ನಮ್ಮ ಕರ್ನಾಟಕದವರದ್ದು ಇನ್ನೊಂದು ಬ್ಲಾಗ್ ಸೈಟ್ ಗೊತ್ತಾಯಿತು. ಚೆಕ್ ಮಾಡಿ ನೋಡಿ.
April 11, 2006
ಉಗಾದಿ ಸಮಾರಂಭ (Ugadi celebration – east side)
ಸಹ್ಯಾದ್ರಿ ಕನ್ನಡ ಸಂಘ
ಸಿಯಾಟಲ್ ಕನ್ನಡ ಕೂಟದ ಹೆಸರು ಸಹ್ಯಾದ್ರಿ ಕನ್ನಡ ಸಂಘ. ಕಳೆದ ಎರಡು ವರ್ಷಗಳು ಉಗಾದಿ ಸಮಾರಂಭಕ್ಕೆ ಅಲ್ಲಿ ಹೋಗಿದ್ದೆವು. ಈ ವರ್ಷವೂ ಸಹ ಉಗಾದಿ ಸಮಾರಂಭವನ್ನ ಮೇ ೬ ರಂದು ಏರ್ಪಡಿಸಿದ್ದಾರೆ. ವಿಳಾಸ ಇತ್ಯಾದಿ ವಿಚಾರಗಳಿಗೆ ಇಲ್ಲಿ ನೋಡಿ. – ಸಹ್ಯಾದ್ರಿಕನ್ನಡಸಂಘ.ಕಾಮ್