ಕನ್ನಡ ಬಾಂಧವರಿಗೆಲ್ಲಾ ದೀಪಾವಳಿ ಶುಭಾಷಯಗಳು !!
November 8, 2007
August 27, 2006
ಗಣೇಶ ಚತುರ್ಥಿ
ಆಗಸ್ಟ್ ೨೭, ೨೦೦೬ ರಂದು ಗಣೇಶ ಚತುರ್ಥಿ.
ಅಗಜಾನನ ಪದ್ಮಾರ್ಕಂ ಗಜಾನನಂ ಅಹರ್ನಿಷಮ್
ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ!
ನಾನು ಬೆಂಗಳೂರಿನಲ್ಲಿದ್ದಾಗ ಗೌರೀ ಗಣಪತಿ ಹಬ್ಬಗಳು ಬಹಳ ದೊಡ್ಡದಾಗಿ ಆಚರಿಸಿದ್ದುದು ಒಂಟು. ಅಲ್ಲಿ ಗಣಪತಿ ಹಬ್ಬವನ್ನ ಮನೆಗಳಲ್ಲೇ ಅಷ್ಟೇ ಅಲ್ಲದೆ ಸುಮಾರು ಜನರು ಒಟ್ಟಾಗಿ ಸೇರಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗಣಪತಿ ವಿಗ್ರಹಗಳನ್ನ ಕುಳ್ಳರಿಸಿ ಪೂಜಿಸುತ್ತಿದ್ದರು. ಇಂದೂ ಸಹ ಅಲ್ಲಿ ಈ ಅಭ್ಯಾಸ ವಾಡಿಕೆಯಲ್ಲಿದೆ. ನಮಗೆ ಇಷ್ಟವಾಗುತ್ತಿದ್ದ ಅಂಶವೆಂದರೆ ಬೆಳಗಿನ ಜಾವದ ಲೌಡ್ ಸ್ಪೀಕರ್ ಮೂಲಕ ಬರುತ್ತಿದ್ದ ಹಾಡುಗಳು. ನಾನಿನ್ನೂ ನಿದ್ದೆಯಿಂದ ಏಳುವುದೋ ಬೇಡವೋ ಎಂದು ಸ್ನೂಜ಼್ ತೆಗೆದುಕೊಳ್ಳುವ ಹೊತ್ತು ಸುಮಾರು ೬ ಘಂಟೆ ಇರಬಹುದು – ಈ ಹಾಡುಗಳನ್ನ ಕೇಳಿದ ಕೂಡಲೆ ಎದ್ದು, ಆ ದಿನಕ್ಕೆ ಬೇಕಾಗುವ ಹೂವು ಪತ್ರೆಗಳು, ಗರಿಕೆ ಹುಲ್ಲು, ಮಾವಿನ ಸೊಪ್ಪು ಮುಂತಾದವುಗಳನ್ನ ಅಣಿ ಮಾಡಲು ಮುಂದಾಗುತ್ತಿದ್ದೆವು. ನಂತರ ನೈವೇದ್ಯಕ್ಕೆ ಬೇಕಾದ ತಿಂಡಿ ತಿನಿಸುಗಳನ್ನ ಮಾಡಿಕೊಂಡು ಪೂಜೆ ಮೊದಲ್ಗೊಂಡು ನೈವೇದ್ಯವಾಗಿ ಪ್ರಸಾದ (ಕಡುಬು, ಇತ್ಯಾದಿ) ತಿನ್ನುವುದಕ್ಕೆ ಕಾಯುತ್ತಿರುತ್ತಿದ್ದೆ.
ಉದ್ಭವ.ಕಾಮ್ ವೆಬ್ ಸೈಟ್‌ನಲ್ಲಿ ಸಾಕಷ್ಟು ಹಾಡುಗಳು ಮುಂತಾದ ರೆಕಾರ್ಡಿಂಗ್‌ಗಳು ಇವೆ. ಗಣಪತಿ ಪೂಜೆಯಾನು ಆಚರಿಸುವ ವಿಧಾನ, ಸಂಕಷ್ಟಹರ ಸ್ತುತಿ, ಇತ್ಯಾದಿ ಹಾಡು, ಶ್ಲೋಕಗಳನ್ನ ಕೂಡ ಅಲ್ಲಿ ಪಡೆಯಬಹುದು.
ಗಣೇಶ ಚತುರ್ಥಿ ಶುಭಾಷಯಗಳು
ಗಣಪತಿ ತಮಗೆಲ್ಲರಿಗೂ ಸಕಲ ವಿಘ್ನಗಳನ್ನೂ ನಿವಾರಿಸಿ ಸುಗಮ ಹಾದಿಯನ್ನ ಒದಗಿಸಿಕೊಡಲೆಂದು ಆಶಿಸುವ…
ಹಾ.. ಅಕ್ಸ್ಮಾತ್ತಾಗಿ ಚಂದಿರ ದರ್ಶನವನ್ನೇನಾದರೂ ಈ ದಿನದಂದು ಮಾಡಿದರೆ ಗನ್ಣಪತಿ ಕಥಾ ಶ್ರವಣದಲ್ಲಿ ಇರುವ ಸ್ಯಮಂತಪೋಕ್ಯಾನ ಮಂತ್ರವನ್ನ ಪಠಿಸುವುದನ್ನ ಮರೆಯದಿರಿ.
ಸಿಂಹಃ ಪ್ರಸೇನಮವಧೀತ್ ಸಿಂಹೊ ಜಾಂಬವತಾ ಹತಃ
ಸುಕುಮಾರಕ ! ಮಾ ರೊದಿಃ ತವ ಹ್ಯೇಶ ಶ್ಯಮಂತಕಃ !
ರಾಮ್
August 26, 2006
August 6, 2006
ಉಪಾಕರ್ಮ
ಉಪಾಕರ್ಮ
ಇತ್ತೀಚೆಗೆ ಹೀಗೆ ಅಂತರ್ಜಾಲದಲ್ಲಿ ಬ್ಲಾಗ್ ಪೋಸ್ಟ್ ಮಾಡುತ್ತಿರಬೇಕಾದರೆ ಈ ಒಂದು ಸೈಟ್‌ನಲ್ಲಿ ಉಪಾಕರ್ಮ ಕುರಿತಾದ ವಿಚಾರಗಳು ಲಿಂಕ್ ಮಾಡಿರುವುದು ಕಂಡುಬಂತು. ಅವುಗಳಲ್ಲಿ ಇದು ನನಗೇನೋ ಬಹಳ ಉಪಯೋಗಕಾರಿ ಎಂದೆನಿಸಿತು. ಹಾಗೂ ಈ ವಿಷಯ ಸಮಯೋಪಕಾರಿ ಕೂಡ ಏಕೆಂದರೆ ಮುಂದಿನ ವಾರ (ಆಗಸ್ಟ್ ೮, ಹಾಗೂ ೯ ರಂದು ಯಜುರ್ ಹಾಗೂ ಋಗ್‌ವೇದೀ ಉಪಾಕರ್ಮವೆಂದು ಕ್ಯಾಲೆಂಡರ್‌ನಿಂದ ಗೊತ್ತಾಯಿತು.
ಇಂತಹ ಒಂದು ವಿಚಾರವನ್ನ ಬ್ಲಾಗ್ ಮಾಡಿದ್ದಕ್ಕೆ ಧನ್ಯವಾದಗಳು ರಾಮ್ಸಬೋಡ್.