kannada

May 22, 2006

ಸೌತೇಕಾಯಿ ಸೂಪ್

Filed under: ತಿಂಡಿ ತಿನಿಸು (Recipe) — kannada @ 6:44 am

ಸೌತೇಕಾಯಿ ಸೂಪ್

ಇಂದು ಸಂಜೆ ನಮ್ಮ ಊಟದ ನಂತರ ನಾವು ಬೆರೆ ಏನಾದರು ಹೊಸ ತಿಂಡಿ ಟ್ರೈ ಮಾಡಬೇಕೆಂದು ಕೊಂಡು ಇದೊಂದನ್ನ ಪ್ರಯತ್ನಿಸಿದೆವು – ಸೌತೇಕಾಯಿ ಸೂಪ್

ಸಾಮಗ್ರಿಗಳು:

  • ಸೌತೇಕಾಯಿ – 1
  • ಮೊಸರು – 1 ಕಪ್
  • ಸಣ್ಣ (ಸಾಂಬಾರ್) ಈರುಳ್ಳಿ – 2
  • ಉಪ್ಪು – ರುಚಿಗೆ ತಕ್ಕಷ್ಟು
  • ಮೆಣಸು ಪುಡಿ – 1/2 tsp

ಸೌತೇಕಾಯಿ ಸಿಪ್ಪೆ ತೆಗೆದು, ಹೆಚ್ಚಿ, ತಿರುಳು ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳುವುದು. ಈರುಳ್ಳಿ ಕೂಡ ಒಂದೆರಡು ಹೋಳು ಮಾಡಿ, ಮಿಕ್ಕ ಬೇರೆ ಸಾಮಗ್ರಿಗಳನ್ನೂ ಸೇರಿ ಎಲ್ಲವನ್ನೂ ಬ್ಲೆಂಡರ್‌ಗೆ ಹಾಕಿ ಸಾಕಷ್ಟು ಹದಕ್ಕೆ ಬ್ಲೆಂಡ್ ಮಾಡುವುದು. ತಣ್ಣಗೆ ಬೇಕೆಂದರೆ ಇದನ್ನ ಒಂದು ಪಾತ್ರೆಗೆ ಹಾಕಿ ಫ಼್ರೀಜ಼ರ್‌ನಲ್ಲಿ ಸ್ವಲ್ಪ ಹೊತ್ತು ಇಡುವುದು.

  • ಬ್ರೆಡ್ಡು - 2 ಸ್ಲೈಸುಗಳು
  • ಕೊತಂಬರಿ ಸೊಪ್ಪು – ಒಂದೆರಡು

ಬ್ರೆಡ್ಡು ಸ್ಲೈಸುಗಳನ್ನ ಟೋಸ್ಟರ್‌ನಲ್ಲಿ ಒಂದೆರಡು ನಿಮಿಷ ಇಟ್ಟು ನಂತರ ಹೋಳುಗಳನ್ನಾಗಿ ಮಾಡಿಟ್ಟುಕೊಳ್ಳುವುದು. ಕೊತ್ತಂಬರಿ ಸೊಪ್ಪನ್ನ ಸಣ್ಣಗೆ ಹೆಚ್ಚಿಟ್ಟುಕೊಳ್ಳುವುದು.

ಬ್ಲೆಂಡ್ ಮಾಡಿ ಫ಼್ರೀಜ಼ರ್‌ನಲ್ಲಿಟ್ಟುರುವ ಕಪ್ ಈಗ ಹೊರಗೆ ತೆಗೆದು, ಅದರಲ್ಲಿ ಈ ಬ್ರೆಡ್ಡು ಹೋಳುಗಳು ಹಾಗೂ ಹೆಚ್ಚಿರುವ ಕೊತ್ತಂಬರಿ ಸೊಪ್ಪನ್ನ ಗಾರ್‍ನಿಷಿಂಗಾಗಿ ಹಾಕುವುದು.

ಸೌತೇಕಾಯಿ ಸೂಪ್ ಈಗ ತಯಾರು.

ಇದೇ ಮೊದಲ ಬಾರಿ ಹೀಗೆ ತಯಾರಿಸಿ ಸೇವಿಸಿದ ಬಳಿಕ ಮತ್ತೆ ರಾತ್ರಿ ಊಟ ಬೇಕಾಗಲಿಲ್ಲ. ಹಹ್ಹಹ್ಹಾ

ತಿನ್ನುವ ಆತುರದಲ್ಲಿ ಫೋಟೋ ತೆಗೆದಿಟ್ಟುಕೊಳ್ಳುವುದು ಮರೆತುಬಿಟ್ಟೆವು. :)

{ಟೆಕ್ನೋರತಿ ಟ್ಯಾಗ್: vegetarian}

2 Comments »

  1. tamoto soop

    Comment by Rekha — May 3, 2009 @ 5:26 am

  2. [...] By ootathindi We had tried a Cucumber soup a couple of years ago (posted here), and had almost forgotten about it. Looked at the post last night and coincidentally, we had all [...]

    Pingback by Cucumber Soup « nammane oota thindi — May 11, 2009 @ 5:31 pm


RSS feed for comments on this post. TrackBack URI

Leave a comment

Blog at WordPress.com.