ಹಬ್ಬ ಹರಿದಿನಗಳು
ಸುಮಾರು ಜನರಿಗೆ ಹಬ್ಬ ಹರಿದಿನಗಳ ಹಿನ್ನಲೆ ಆಗಲೀ ಅಥವ ಹಬ್ಬಗಳನ್ನ ಯಾಕೆ ಆಚರಿಸಬೇಕು ಎಂಬುವ ವಿಚಾರ ಗೊತ್ತಿರಲಿಕ್ಕಿಲ್ಲ. ಅದು ಸರಿ, ನಾನು ಶಾಲಾ ದಿನಗಳಲ್ಲಿ ಹಬ್ಬವೆಂದರೆ ಸಕಲ ತಿನಿಸುಗಳನ್ನ ಸವಿಯುವುದು ಒಂದು ಪರ್ಪಸ್ ಆಗಿರುತ್ತಿತ್ತು. ಅಂದಿನ ದಿನ ಬೆಳಗಿನ ಜಾವದಿಂದ ಹಿಡಿದು ಮಧ್ಯಾಹ್ನದವರೆಗೂ ನನ್ನ ಅಪ್ಪ ಅಮ್ಮ ಸಾಕಷ್ಟು ತಿಂಡಿಗಳನ್ನ ಮಾಡಿರುತ್ತಿದ್ದರು. ನಾನು ನನ್ನ ತಮ್ಮ ಊಟದ ಸಮಯಕ್ಕೆ ಕಾಯೂತ್ತಿದ್ದೆವು. ಪೂಜಾದಿಗಳು ಮುಗಿದು ನೈವೇದ್ಯಕ್ಕೆ ರೆಡಿಯಾದ ಕೂಡಲೆ ಅಲ್ಲಿಟ್ಟಿದ್ದ ತಿಂಡಿಗಳನ್ನ ತಿನ್ನುವುದೇ ಒಂದು ಮೋಜಾಗಿತ್ತು.
ಏನೇ ಆಗಲೀ ಕೆಲವು ಹಿನ್ನಲೆಗಳನ್ನ ಈಗಲಾದರು ತಿಳಿಯುವುದು ಒಳ್ಳೆಯದು ಅನಿಸುತ್ತೆ. ಇತ್ತೀಚೆಗೆ ಒಂದು ವೆಬ್ ಸೈಟ್ ನೋಡಿದೆ. ಅಲ್ಲಿ ಪೂರ್ತಿಯಲ್ಲದಿದ್ದರೂ ಇಂತಹ ಕೆಲವು ವಿಷಯಗಳನ್ನ ಪಬ್ಲಿಷ್ ಮಾಡಿದ್ದಾರೆ. ಹೋಗಿ ನೋಡಿ
{technorati tag: Indian Festivals}