kannada

January 24, 2008

ರಾಗಿ ಮುದ್ದೆ

Filed under: ತಿಂಡಿ ತಿನಿಸು (Recipe) — kannada @ 11:27 pm


ಹೀಗೆ ಸುಮಾರು ದಿನಗಳಾಗಿ ಹೋದವು ಇಲ್ಲಿ ಪೋಸ್ಟ್ ಮಾಡಿ. ಕೊನೇ ಪಕ್ಷ ರಾಗಿ ಮುದ್ದೆ ಬಗ್ಗೆ ಆದ್ರೂ ಬರೆದು ಹಾಕೋಣವೆಂದರೆ ಆಗದೆ ಹೋಗಿದೆ. ಇತ್ತೀಚೆಗೆ ಇಲ್ಲಿ ನೋಡಿದಾಗ, ನಾನು ಈ ತಿನಿಸಿನ ಬಗ್ಗೆ ಬರೆದಿರುವ ನೆನಪು ಬಂದಿತ್ತು. ಸೀರಿಯಸ್ಲಿ, ಚೆನ್ನಾಗಿ ಗುರುತು ಬಂದಿತ್ತು, ತದನಂತರ ಸ್ವಲ್ಪ ನನ್ನಲ್ಲೇ ವಿಚಾರ ಮಾಡಿದಾಗ ಹೊಳೆಯಿತು, ನಾನು ಸುಮಾರು ಪ್ರತೀದಿವಸ ಮನಸ್ಸಿನಲ್ಲಿ ನೆನಪಿಸಿಕೊಂಡಿರುತಿದ್ದೇನೆಯೇ ಹೊರತು, ಅಕ್ಷರಗಳು ಇಲ್ಲಿಯಂತೂ ಬಂದಿರಲಿಲ್ಲ.
ಬ್ಯಾಕ್ ಟು ಟಾಪಿಕ್:
ರಾಗಿ ಮುದ್ದೆ ಮಾಡಲು ಬೇಕಾಗುವ ಸಾಮಗ್ರಿಗಳು:
      ರಾಗಿ ಹಿಟ್ಟು - ೧ ಕಪ್
      ನೀರು  - ೧.೫ ಕಪ್  (೧ - ೧.೫ ಹಿಟ್ಟು-ನೀರು ಅಳತೆ)
      ಹಿಂಗು - ಒಂದು ಚಿಟುಕು (ನಾನು ಎಂದೂ ಇದನ್ನ ಹಾಕಿದ್ದನ್ನ ನೋಡಿರಲಿಲ್ಲ, ಹಾಗಾಗಿ ನನ್ನದೇ ಆದ ಫ಼್ಲೇವರ್‌ಗಾಗಿ ಟ್ರೈ ಮಾಡಿದೆ)
      ಜೀರಿಗೆ - ಒಂದು ಚಮಚ ( ಇದೂ ಸಹ)
      ದಪ್ಪ ತಳವಿರುವ ಪಾತ್ರೆ
      ಮರದ ಕೋಲು
      ಸ್ಟೋವ್,
      ಇಕ್ಕಳ ಅಥವ ಬಟ್ಟೆ ( ಬಿಸಿ ಪಾತ್ರೆಯನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಬೇಕಾದರೆ)

 ragimuddhe_b1.jpg  ragimuddhe_b2.jpg


ಮಾಡುವ ವಿಧಾನ:
      ಅ. ಪಾತ್ರೆಯಲ್ಲಿ ೧.೫ ಕಪ್ ಅಳತೆ ನೀರು ಹಾಕಿ ಒಲೆಯ ಮೇಲೆ ಇಡುವುದು (make sure to light the stove)
      ಆ. ನೀರು ಬಿಸಿಯಾಗುತ್ತಿದ್ದಂತೆ ತೆಗೆದಿಟ್ಟುಕೊಂಡಿರುವ ಹಿಂಗು, ಜೀರಿಗೆ ಎರಡನ್ನೂ ಹಾಕುವುದು
      ಇ. ನೀರು ಕುದಿಯಲು ಬರವ ಹೊತ್ತಿಗೆ, ಹಿಟ್ಟು ಹಾಗು ಕೋಲು ಹತ್ತಿರವಿಟ್ಟುಕೊಂಡಿರುವುದು.
      ಈ. ನೀರು ಕುದಿ ಬಂದ ಮೇಲೆ ಸ್ಟೋವ್ ಕಾವು ಕಡಿಮೆ ಮಾಡುವುದು.
      ಉ. ಹಿಟ್ಟನ್ನ ಕುದಿಯುತ್ತಿರುವ ನೀರಿಗೆ ಹಾಕಿ
      ಊ. ಕೂಡಲೇ ಒಂದು ಕೈಯಲ್ಲಿ ಪಾತ್ರೆ ಹಿಡಿದು, ಇನ್ನೊಂದು ಕೈಯಲ್ಲಿ ಕೋಲಿನಿಂದ ಹಿಟ್ಟನ್ನು ರಭಸವಾಗಿ ಕಲಿಸುವುದು. ಈ ಒಂದು ಹಂತ ಬಹು ಬೇಗ ಮಾಡಬೇಕು. ವಿಳಂಬವಾದರೆ, ಹಿಟ್ಟು ಗಂಟು ಕಟ್ಟುವ ಸಾಧ್ಯತೆ ಇದೆ. ಪಾತ್ರೆಯಲ್ಲಿ ಎಲ್ಲೂ ಬರೆ ಹಿಟ್ಟು ಕಾಣದ ಹಾಗೆ ಕಲಿಸಬೇಕು.
      ಋ. ಹಾಗೆ ಕಲಿಸಿದ ನಂತರ, ಅದೇ ಕಡಿಮೆ ಫ಼್ಲೇಮ್‌ ಮೇಲೆ, ಎರಡರಿಂದ ಮೂರು ನಿಮಿಷ ಹಾಗೇ ಇಡುವುದು.

ಉಂಡೆ ಮಾಡುವ ವಿಧಾನ:
      ಅ. ಒಂದು ತಟ್ಟೆ, ಒಂದು ಕಪ್ ತಣ್ಣೀರು ತೆಗೆದಿಟ್ಟುಕೊಳ್ಳುವುದು
      ಆ. ಮೇಲೆ ಬೆಂದ ಹಿಟ್ಟನ್ನು ತಟ್ಟೆಗೆ ಪೂರ್ತಿ ಅಥವ ಸ್ವಲ್ಪ ಬೊಗಸಿಕೊಳ್ಳುವುದು
      ಇ. ಕೈಯನ್ನು ತಣ್ಣನೆ ನೀರಿನಲ್ಲಿ ಒಮ್ಮೆ ಅದ್ದಿಕೊಂಡು, ತಟ್ಟೆಯಲ್ಲಿ ಬೊಗಸಿಟ್ಟುಕೊಂಡಿರುವ ಹಿಟ್ಟನ್ನು (ಎಷ್ಟು ದೊಡ್ಡದಾಗಿ ಬೇಕೋ ಅಷ್ಟು) ಉಂಡೆ ಮಾಡುವುದು.

ತಿನ್ನುವ ವಿಧಾನ:
      ತಿನ್ನುವ ವಿಧಾನವೆಂದರೇನು? ಹೌದು, ಇದನ್ನ ತಿನ್ನುವ ವಿಧಾನ ಬೇರೆ ಇದೆ. ಇದನ್ನ ಬರೀದಾಗಿ ತಿನ್ನಲು ಕಷ್ಟ. ಇದಕ್ಕೆ ಹುಳಿ, ಸಾರು, ಗೊಜ್ಜು, ಮೊಸರು ಇಂತಹ ಯಾವುದಾದರೊಂದು ಇದ್ದರೆ ತಿನ್ನಲು ಚೆನ್ನ. ಉಂಡೆ ಮಾಡಿದ ನಂತರ, ಇದನ್ನು ತಣ್ಣಗಾಗುವ ಮುಂಚೆ ತಿನ್ನಬೇಕು. ಹಾಗಾಗಿ ಇದನ್ನ ಊಟಕ್ಕೆ ಕುಳಿತುಕೋಳ್ಳುವ ೫ ನಿಮಿಷ ಮುಂಚೆ ಮಾಡಲು ಶುರು ಮಾಡಿದರೆ ಉತ್ತಮ. ತಣ್ನಗಾದ ನಂತರ ಇದನ್ನ ಮತ್ತೆ microwaveನಲ್ಲಿ ಇಟ್ಟು ತಿನ್ನಲು ಆಗುವುದಿಲ್ಲ.
      ಅ. ತಟ್ಟೆಗೆ ಸಾರು/ಹುಳಿ ಹಾಕಿಕೊಂಡು, ಮೇಲೆ ಮಾಡಿರುವ ಮುದ್ದೆಯನ್ನ ಹಾಕಿಕೊಳ್ಳುವುದು
      ಆ. ಮುದೆಯ ಮೇಲೆ ಎಷ್ಟು ಬೇಕೋ ಅಷ್ಟು ತುಪ್ಪ ಹಾಕಿಕೊಂಡರೆ, ಸವಿಯಲು ಮಜಾ ಇರತ್ತೆ.
      ಇ. ಕೈಯಲ್ಲಿ ಸ್ವಲ್ಪ ಹಿಟ್ಟು ಮುರಿದು, ಸಾರಿನಲ್ಲಿ ಅದ್ದಿ (ಸವರಿ/ಮುಳುಗಿಸಿ), ಬಾಯಲ್ಲಿ ಹಾಕಿಕೊಂಡು, “ನುಂಗಿಬಿಡಬೇಕು”. ಕೆಲವರು, ಬಹುಶಃ ಮಕ್ಕಳು ಇದನ್ನ ಅಗೆದು ತಿನ್ನುತ್ತಾರೆ. ಇದು ಹಾಗೆ ಹಲ್ಲಿನಲ್ಲಿ ಮೆತ್ತಿಕೊಳ್ಳುವುದರಿಂದ, ನುಂಗಿದರೆ ಒಳ್ಳೆಯದು.

ರಾಗಿ ಮುದ್ದೆ ಉಪಯೋಗ:
      ಅ. ಇದು ಸಾಕಷ್ಟು ಪ್ರೋಟೀನ್ ಹಾಗು ಕಡಿಮೆ ಕಾರ್ಬೋಹೈಡ್ರೇಟ್ಸ್ ಕೊಡುವುದರಿಂದ, ದೇಹಕ್ಕೆ ಒಳ್ಳೆಯದು
      ಆ. ಇದು ನಿಧಾನವಾಗಿ ಜೇರ್ಣವಾಗುವುದರಿಂದ, ಎನರ್ಜಿ ಸ್ವಲ್ಪ ಸ್ವಲ್ಪವಾಗಿ ರೆಲೀಸ್ ಮಾಡಿ ಹೆಚ್ಚು ಹೊತ್ತು ತಾಕತ್ತು ಕೊಡುತ್ತದೆ
      ಇ. ಸುಮಾರು ೧೫ ನಿಮಿಷದಲ್ಲಿ ಸಾರು ಮುದ್ದೆ ರೆಡಿಯಾಗುತ್ತೆ, ಅದರಲ್ಲೂ, ಸಂಜೆ ಮನೆಗೆ ಬಂದು ಅಡುಗೆ ಮಾಡಲು ಚತನ್ಯವಿರದಿದ್ದರೆ, ಇದು ಒಂದು ಸುಗಮ ದಾರಿ :)

ನಾನು ಸಾಮಾನ್ಯವಾಗಿ ಬೆಳಿಗ್ಗೆ ಆಫ಼ೀಸಿಗೆ ಹೊರಡುವ ಮುಂಚೆ ತಿಂದು ಹೊರಡುತ್ತೇನೆ. ಕೆಲವು ಸಲ ಸಂಜೆ ಊಟದ ಜೊತೆ ನಾವು ಇದನ್ನ ಮಾಡಿರುತ್ತೇವೆ.

January 15, 2008

ಸಂಕ್ರಾಂತಿ ಶುಭಾಷಯಗಳು

Filed under: ಇತ್ಯಾದಿ — kannada @ 5:57 am

ಮಕರ ಸಂಕ್ರಾಂತಿ ಶುಭಾಷಯಗಳು

December 18, 2007

ತಿಂಡಿ ತಿನಿಸು - ರೆಸಿಪಿ? (Recipe)

Filed under: ತಿಂಡಿ ತಿನಿಸು (Recipe) — kannada @ 12:26 am

ಈ ಬ್ಲಾಗ್-ನಲ್ಲಿ ತಿಂಡಿ ತಿನಿಸುಗಳ ಬಗ್ಗೆ ಅಷ್ಟಾಗಿ ಬರೆದಿರಲಿಲ್ಲ. ಇತ್ತೀಚೆಗೆ ಕೆಲವು ತಿನಿಸುಗಳನ್ನ ಇಲ್ಲಿ ಕೆಲವರಲ್ಲಿ ಶೇರ್ ಮಾಡಬೇಕೆಂದಿನಿಸಿತು. ಕೊನೆ ಪಕ್ಷ ಬೇರೆ ಏನೂ ಬರೆಯಲು ತೋಚದಿದ್ದರೂ, ದಿನ ನಿತ್ಯ ತಿನ್ನುವ ತಿನಿಸುಗಳ ಬಗೆಗಾದರೂ ಇಲ್ಲಿ ಬರೆಯುವ ಸಾಹಸ ಮಾಡಬೇಕೆನಿಸಿದೆ. ಇತೀಚೆಗೆ ವೈದ್ಯರು ನನಗೆ ಲೊ-ಸೋಡಿಯಮ್ ಅಂಥ ಬೇರೆ ಹೇಳಿ ಈಗ ಆಂತಹ ಕೆಲವು ರೆಸಿಪಿಗಳನ್ನ ನಾವು ಮನೆಯಲ್ಲಿ ಸುಮಾರು ಪ್ರಯತ್ನ ಮಾಡುತ್ತಿರುವುದು ಮತ್ತೊಂದು ಇನ್ಸ್ಪಿರೇಷನ್ ನನಗೆ ಎಂದು ಹೇಳಿದರೂ ಆಶ್ಚರ್ಯವಲ್ಲ. ಹೀಗೆ ನನ್ನ ಪಟ್ಟಿಯಲ್ಲಿರುವ ಮೊದಲನೇ ತಿನಿಸು - ರಾಗಿ ಮುದ್ದೆ. 
                                                                                   (…ಸಶೇಷ)

November 9, 2007

ಅಪ್ಪ ಹೋಗಿ ಮಪ್ಪ-ವೆಂದಾಯಿತು…

Filed under: ಇತ್ಯಾದಿ, ಶಂಭಾಷಣೆ — kannada @ 8:24 am

EwÛÃZÉUÉ £ÀªÀÄä 2.5 ªÀµÀðzÀ ªÀÄUÀÄ vÀ£Àß CªÀÄä£À §½ ºÉÆÃV F ªÀÄÄA¢£À ¸ÀA¨sÁ±ÀuÉ £ÀqɬÄvÀÄ:
«: CªÀÄä ªÉÆ¸ÀgÀÄ ªÀĪÀÄäA PÀ®Äì .
£À£ÁßPÉ PÉÊ ©qÀÄ«®èzÉ: «, ¤ªÀÄä¥Àà CzÀ£Àß PÀ°¸ÀÄvÁÛgÉ, CªÀgÀ£Àß PÉüÀªÀÄä
«: (£À£Àß §½ §AzÀÄ) ªÀÄ¥Àà ªÀÄ¥Àà JAzÀ¼ÀÄ
£Á£ÀÄ: (£À£ÀUÀ®èªÉ£ÀÄߪÀAvÉ £À£Àß ¥ÁrUÉ £Á£ÀÄ PÀĽwzÉÝ)
«: ªÀÄ¥Àà ªÀÄ¥Àà, ªÉƸÀgÀÄ ªÀĪÀÄäA PÀ®Äì, ¦èøï! JAzÀÄ PÉÊ »rzÀ¼ÀÄ
 
EAvÀºÀ MAzÉgÀqÀÄ ¸À¤ßªÉñÀUÀ¼ÀÄ £ÀqÉzÁUÀ CjªÁ¬ÄvÀÄ, C¥Àà ºÉÆÃV ªÀÄ¥Àà D¬ÄvÉAzÀÄ :)  

November 8, 2007

ದೀಪಾವಳಿ ಶುಭಾಷಯಗಳು

Filed under: ಆಚಾರ-ವಿಚಾರ - Rituals — kannada @ 7:05 am

ಕನ್ನಡ ಬಾಂಧವರಿಗೆಲ್ಲಾ ದೀಪಾವಳಿ ಶುಭಾಷಯಗಳು !!

November 3, 2007

ಕನ್ನಡ - Mommy, hold my ಕೈ

Filed under: Language - ಭಾಷೆ, ಇತ್ಯಾದಿ — kannada @ 9:06 am

ನಮ್ಮ ಎರಡು ವರ್ಷದ ಮಗು ಇತ್ತೀಚೆಗೆ ಕನ್ನಡ ಹಾಗೂ ಇಂಗ್ಲೀಷು ಎರಡೂ ಅರ್ಥ ಮಾಡಿಕೊಳ್ಳುವುದೂ ಹಾಗೂ ಮಾತನಾಡುವುದು ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ. ಹಾಗಾಗಿ ನಾವು ಹಲವಾರು ಪದಗಳನ್ನ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಹೇಲುತ್ತೇವೆ - ಹಾಗಾಗಿಯಾದರೂ ಅವಳಿಗೆ ನಮ್ಮ ಮಾತೃ ಭಾಷೆ ಕನ್ನಡದ ಅಭಿಮಾನ ಕಂಡುಬರುವುದೆಂಬುದು ಒಂದು ಆಶಯಹೀಗಿರುವಲ್ಲಿ, ತಾನು ಇಂಗ್ಲೀಷಿನಲ್ಲಿ ಏನಾದರೂ ಹೆಳಿಧರೆ, ಅದನ್ನ ನಾವು ಕನ್ನಡದಲ್ಲಿ ಹೇಳು ಎಂಬುದು ವಾದಿಕೆಯಾಗಿಹೋಗಿದೆ. ಇಂತಹ ಒಂದು ಸನ್ನಿವೆಷ.

ವಿ:       Mommy, hold my hands!
ಅಮ್ಮ: ವಿ, ಅದನ್ನೇ ಕನ್ನಡದಲ್ಲಿ ಹೇಳು ಮಗು.
ವಿ:       ಕನ್ನಡ - Mommy, hold my ಕೈ!!

ಎಂದು ಹೇಳಿಬಿಡುವುದೇ?

ಕನ್ನಡದ ಹಿರಿಮೆ

Filed under: Language - ಭಾಷೆ — kannada @ 8:49 am

ಇತ್ತೀಚೆಗೊಂದು ಕನ್ನಡದ ಹಿರಿಮೆಯ ಬಗ್ಗೆ ಒಂದು -ಮೈಲ್ ಬಂಧಿತ್ತುಅಚ್ಚರಿಯೆಂದರೆ ಕನ್ನಡ ಎಂಬುವ ಪದವೊಂದು ಬಿಟ್ಟು ಮಿಕ್ಕೆಲ್ಲ ಅಕ್ಷರಗಳೂ ಇಂಗ್ಲೀಷಿನದ್ಡಾಗಿತ್ತು.

is the third oldest language of India . ( After . . Sanskrit & Tamil )
is as old as 2000 years.
is 99.99% perfect - logically and scientifically.

……

April 17, 2007

ಶುಭಾಷಿತ

Filed under: Language - ಭಾಷೆ, sanskrit — kannada @ 8:28 pm

 

ಶುಭಾಷಿತಗಳನ್ನ ಯಾವುದೋ ಪರ್ಪಸ್ ಮೇಲೆ ಬರೆದಿರುತ್ತಾರೆವೆಂಬುದು ನನ್ನ ಅನಿಸಿಕೆ. ಅವುಗಳನ್ನ ಒಳ್ಳೆ ಅರ್ಥಕ್ಕಾಗಿಯೇ ಬರೆದಿರುತ್ತರೆಂಬುದು ಕೂಡ ಒಂದು ನಂಬಿಕೆ. ಏನೇ ಆದರೂ, ಅದನ್ನ ಅರ್ಥ ಮಾಡಿಕೊಳ್ಳುವುದರ ಮೇಲೆ ಆ ಶುಭಾಷಿತಗಳು ಏನನ್ನು ಕನ್ವೇ ಮಾಡುತ್ತವೆಂದು ಯೋಚಿಸಬೇಕಾಗುತ್ತೆ. ಇತ್ತೆಚೆಗೆ ನಾನು ಈ ಶುಭಾಷಿತವನ್ನ ಗಮನಿಸಿದೆ.

ಪುನರ್ ವಿತ್ತಂ ಪುನರ್ ಮಿತ್ರಂ ಪುನರ್ ಭಾರ್ಯಾ ಪುನರ್ ಮಹೀ!

ಏತತ್ ಸರ್ವಂ ಪುನರ್ ಲಭ್ಯಂ ನ ಶರೀರಂ ಪುನ: ಪುನ: ||

ಈ ಶುಭಾಷಿತದ ಪ್ರಕಾರ “ಸುಮಾರೆಲ್ಲವನ್ನೂ ಮತ್ತೊಮ್ಮೆ ಪಡೆಯಬಹುದು - ಧನ, ಮಿತ್ರರು, ಪತ್ನಿ, ಭೂಮಿ, ಇತ್ಯಾದಿ ಆದರೆ ತನ್ನ ದೇಹವನ್ನ ಮಾತ್ರ ಮರಳಿ ಪಡೆಯಲು ಸಾಧ್ಯವಿಲ್ಲ” –> ಇದರಲ್ಲಿ ಒಂದನ್ನ ನಾನು ಖಂಡಿಸುತ್ತೇನೆ. ಧನವನ್ನ ಮತ್ತೆ ಸಂಪಾದಿಸಬಹುದು ಸರಿ, ಮಿತ್ರರು ಒಬ್ಬರಲ್ಲದಿದ್ದರೆ ಮತ್ತೊಬ್ಬರು ಎನ್ನುವ ಹಾಗೆ ಬೇರೆ ಸ್ನೇಹಿತರನ್ನ ಮಾಡಿಕೊಳ್ಳಬಹುದು, ಭೂಮಿ ಮತ್ತೆ ನೀರು ಪಾಲಾಗುವ ಸ್ಂಭವ ಒಂದು ಬಿಟ್ಟು ಮತ್ತೆ ಖರೀದಿಸಬಹುದು; ಆದರೆ ಒಮ್ಮೆ ಕಳೆದ ಪತ್ನಿಯನ್ನ ಮತ್ತೆ ಪಡೆಯಲು ಸಾಧ್ಯವಿಲ್ಲ - ನನಗನಿಸುವ ಹಾಗೆ ಇದೂ ಕೂಡ ಅರ್ಥ ಮಾಡಿಕೊಂಡಂತೆ ಹೋಗುತ್ತೆ. ಅದೇ ಪತ್ನಿಯನ್ನ ಮರಳಿ ಪಡೆಯುವುದೇ ಅಥವ ಬೇರೆಯೊಬ್ಬರನ್ನ ಮದುವೆ ಮಾಡಿಕೋಳ್ಳುವ ಅರ್ಥವೆ? ಅಥವ ಡಿವೋರ್ಸ್ ಆಗಿರುವ ಪತ್ನಿಯನ್ನ ಮತ್ತೆ ಸಮಾಧಾನಿಸಿ ಕರೆತರುವುದೆ? ಅಥವ ಬೇರೆ ಏನಾದರೂ ಅರ್ಥವೆ?

 

 

October 30, 2006

ವಚನ

Filed under: ಕನ್ನಡ - Kannada — kannada @ 6:42 pm

ಕಳಬೇಡ ಕೊಲಬೇಡ

 

ಕಳಬೇಡ ಕೊಲಬೇಡ

ಹುಸಿಯ ನುಡಿಯಲುಬೇಡ

ಮುನಿಯಬೇಡ

ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬಣ್ಣಿಸಬೇಡ

ಇದಿರ ಹಳಿಯಲುಬೇಡ

ಇದೇ ಅಂತರಂಗ ಶುದ್ಧಿ

ಇದೇ ಬಹಿರಂಗ ಶುದ್ಧಿ

ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ

 

-ಬಸವಣ್ಣ

August 27, 2006

ಗಣೇಶ ಚತುರ್ಥಿ

Filed under: ಆಚಾರ-ವಿಚಾರ - Rituals — kannada @ 5:32 pm

ಆಗಸ್ಟ್ ೨೭, ೨೦೦೬ ರಂದು ಗಣೇಶ ಚತುರ್ಥಿ.

ಅಗಜಾನನ ಪದ್ಮಾರ್ಕಂ ಗಜಾನನಂ ಅಹರ್ನಿಷಮ್

ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ!

ನಾನು ಬೆಂಗಳೂರಿನಲ್ಲಿದ್ದಾಗ ಗೌರೀ ಗಣಪತಿ ಹಬ್ಬಗಳು ಬಹಳ ದೊಡ್ಡದಾಗಿ ಆಚರಿಸಿದ್ದುದು ಒಂಟು. ಅಲ್ಲಿ ಗಣಪತಿ ಹಬ್ಬವನ್ನ ಮನೆಗಳಲ್ಲೇ ಅಷ್ಟೇ ಅಲ್ಲದೆ ಸುಮಾರು ಜನರು ಒಟ್ಟಾಗಿ ಸೇರಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗಣಪತಿ ವಿಗ್ರಹಗಳನ್ನ ಕುಳ್ಳರಿಸಿ ಪೂಜಿಸುತ್ತಿದ್ದರು. ಇಂದೂ ಸಹ ಅಲ್ಲಿ ಈ ಅಭ್ಯಾಸ ವಾಡಿಕೆಯಲ್ಲಿದೆ. ನಮಗೆ ಇಷ್ಟವಾಗುತ್ತಿದ್ದ ಅಂಶವೆಂದರೆ ಬೆಳಗಿನ ಜಾವದ ಲೌಡ್ ಸ್ಪೀಕರ್ ಮೂಲಕ ಬರುತ್ತಿದ್ದ ಹಾಡುಗಳು. ನಾನಿನ್ನೂ ನಿದ್ದೆಯಿಂದ ಏಳುವುದೋ ಬೇಡವೋ ಎಂದು ಸ್ನೂಜ಼್ ತೆಗೆದುಕೊಳ್ಳುವ ಹೊತ್ತು ಸುಮಾರು ೬ ಘಂಟೆ ಇರಬಹುದು - ಈ ಹಾಡುಗಳನ್ನ ಕೇಳಿದ ಕೂಡಲೆ ಎದ್ದು, ಆ ದಿನಕ್ಕೆ ಬೇಕಾಗುವ ಹೂವು ಪತ್ರೆಗಳು, ಗರಿಕೆ ಹುಲ್ಲು, ಮಾವಿನ ಸೊಪ್ಪು ಮುಂತಾದವುಗಳನ್ನ ಅಣಿ ಮಾಡಲು ಮುಂದಾಗುತ್ತಿದ್ದೆವು. ನಂತರ ನೈವೇದ್ಯಕ್ಕೆ ಬೇಕಾದ ತಿಂಡಿ ತಿನಿಸುಗಳನ್ನ ಮಾಡಿಕೊಂಡು ಪೂಜೆ ಮೊದಲ್ಗೊಂಡು ನೈವೇದ್ಯವಾಗಿ ಪ್ರಸಾದ (ಕಡುಬು, ಇತ್ಯಾದಿ) ತಿನ್ನುವುದಕ್ಕೆ ಕಾಯುತ್ತಿರುತ್ತಿದ್ದೆ.  :)

ಉದ್ಭವ.ಕಾಮ್ ವೆಬ್ ಸೈಟ್‌ನಲ್ಲಿ ಸಾಕಷ್ಟು ಹಾಡುಗಳು ಮುಂತಾದ ರೆಕಾರ್ಡಿಂಗ್‌ಗಳು ಇವೆ. ಗಣಪತಿ ಪೂಜೆಯಾನು ಆಚರಿಸುವ ವಿಧಾನ, ಸಂಕಷ್ಟಹರ ಸ್ತುತಿ, ಇತ್ಯಾದಿ ಹಾಡು, ಶ್ಲೋಕಗಳನ್ನ ಕೂಡ ಅಲ್ಲಿ ಪಡೆಯಬಹುದು.

ಗಣೇಶ ಚತುರ್ಥಿ ಶುಭಾಷಯಗಳು

ಗಣಪತಿ ತಮಗೆಲ್ಲರಿಗೂ ಸಕಲ ವಿಘ್ನಗಳನ್ನೂ ನಿವಾರಿಸಿ ಸುಗಮ ಹಾದಿಯನ್ನ ಒದಗಿಸಿಕೊಡಲೆಂದು ಆಶಿಸುವ…

ಹಾ.. ಅಕ್ಸ್ಮಾತ್ತಾಗಿ ಚಂದಿರ ದರ್ಶನವನ್ನೇನಾದರೂ ಈ ದಿನದಂದು ಮಾಡಿದರೆ ಗನ್ಣಪತಿ ಕಥಾ ಶ್ರವಣದಲ್ಲಿ ಇರುವ ಸ್ಯಮಂತಪೋಕ್ಯಾನ ಮಂತ್ರವನ್ನ ಪಠಿಸುವುದನ್ನ ಮರೆಯದಿರಿ.

ಸಿಂಹಃ ಪ್ರಸೇನಮವಧೀತ್ ಸಿಂಹೊ ಜಾಂಬವತಾ ಹತಃ

ಸುಕುಮಾರಕ ! ಮಾ ರೊದಿಃ ತವ ಹ್ಯೇಶ ಶ್ಯಮಂತಕಃ !

ರಾಮ್

Older Posts »

Blog at WordPress.com.